ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇಗುಲಕ್ಕೆ ದೇವಿಯ ಒಡವೆ ರವಾನೆ

ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸಲಿರುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅ.24 ರಿಂದ ನ.3 ರವರೆಗೆ ನಡೆಯಲಿದೆ. ಹೀಗಾಗಿ ಇಂದು ದೇವಿಯ ಒಡವೆಗಳನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಒಡವೆ ಕೊಂಡೊಯ್ಯುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ಅವಕಾಶವಿರುವುದಿಲ್ಲ. ಬದಲಾಗಿ ಗರ್ಭಗುಡಿಯ ಬಾಗಿಲು ತೆರಯಲಿದೆ.

ಹಾಸನ ತಹಶೀಲ್ದಾರ್ ಶ್ವೇತ ಸಮ್ಮುಖದಲ್ಲಿ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ಹೊರತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ಸಂಪ್ರದಾಯದಂತೆ ಮಡಿವಾಳರು ಪಂಜು ಹಿಡಿದು ಮತ್ತು ಮುತ್ತೈದೆಯರು ಆರತಿ ಬೆಳಗಿದರು. ಈ ವೇಳೆ ಭಕ್ತರು ಹಾಸನಾಂಬೆ ದೇವಿಗೆ ಜೈಕಾರ ಕೂಗಿದರು. ಬೆಳ್ಳಿ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬೆ ದೇಗುಲಕ್ಕೆ ತರಲಾಯಿತು.

Edited By : Suman K
Kshetra Samachara

Kshetra Samachara

21/10/2024 01:58 pm

Cinque Terre

700

Cinque Terre

0

ಸಂಬಂಧಿತ ಸುದ್ದಿ