ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಬಿಜೆಪಿ ಉಗ್ರಗಾಮಿ ಪಕ್ಷ - ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಕಲಬುರಗಿ: ಕಾಂಗ್ರೆಸ್ ಪಕ್ಷವನ್ನು ಅರ್ಬನ್ ನಕ್ಸಲರು ನಡೆಸುತ್ತಿದ್ದಾರೆ ಎಂದು ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದು, ಕಲಬುರಗಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಈ ರೀತಿ ಹೇಳಿಕೆ ಮೊದಲಿಂದಲೂ ನೀಡುತ್ತಾ ಬಂದಿದ್ದಾರೆ. ಇಲ್ಲಿವರೆಗೆ ಸುಮ್ಮನೆ ಕುಳಿತಿದ್ದರು, ಈಗ ಜೀವ ಬಂದಿದೆ.

ಯಾರೂ ಬುದ್ಧಿ ಜೀವಿಗಳಿದ್ದಾರೆ ಅವರಿಗೆ ಅರ್ಬನ್ ನಕ್ಸಲ್ ಅಂತ ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದರು. ಹೀಗೆ ಹೇಳಿಕೆ ಕೊಡೋದು ಮೋದಿ ಅವರಿಗೆ ರೂಢಿಯಾಗಿದೆ. ಅವರ ಪಕ್ಷವೇ ಟೆರರಿಸ್ಟ್ ಪಕ್ಷವಾಗಿದೆ. ಹೊಡಿಯೋದು,ದಲಿತರ ಬಾಯಿಯಲ್ಲಿ "ಮೂತ್ರ ಮಾಡೋದು".ಆದಿವಾಸಿ ಹೆಣ್ಣುಮಕ್ಕಳನ್ನು ತಂದು ಅತ್ಯಾಚಾರ ಮಾಡೋದು ಹೀಗೆ ಯಾರು ಮಾಡ್ತಾರೆ ಅವರನ್ನ ಬೆಂಬಲಿಸುತ್ತಾರೆ. ಟೆರೆರಿಸ್ಟ್ ಪಕ್ಷ ಅವರದ್ದಾಗಿದೆ ಎಂದರು.

ಕಾಂಗ್ರೆಸ್ ಬಗ್ಗೆ ಮಾತನಾಡೋದಕ್ಕೆ ಮೋದಿಗೆ ಯಾವುದೇ ಹಕ್ಕು ಇಲ್ಲ, ಮೋದಿ ದೇಶದ ಬಗ್ಗೆ, ಜನರ‌ ಬಗ್ಗೆ ಕಡಿಮೆ‌ ಮಾತಾಡ್ತಾರೆ, ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚು ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Shivu K
PublicNext

PublicNext

12/10/2024 06:17 pm

Cinque Terre

42.28 K

Cinque Terre

18

ಸಂಬಂಧಿತ ಸುದ್ದಿ