ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಲಬುರಗಿ: ಭೀಮಾ ನದಿಯ ಭೀಮಾಲಾಪ: ಮುಳುಗಿತು ದೇವಸ್ಥಾನ

ಕಲಬುರಗಿ: ಮಹಾರಾಷ್ಟ್ರದ ವೀರಭಟ್ಕರ್ ಜಲಾಶಯದಿಂದ ತಾಲೂಕಿನ ಭೀಮಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಮಣ್ಣೂರ ಗ್ರಾಮದ ಭೀಮಾನದಿಯಲ್ಲಿರುವ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ (ಹೋಗುವ) ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿಯವರು ಹಾಗೂ ಅರ್ಚಕರು ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಪಾಯವಾಗಬಾರದು ಎಂಬ ಉದ್ದೇಶದಿಂದ ಸೇತುವೆಯ ಗೇಟ್ ಬಂದ್ ಮಾಡಿದ್ದಾರೆ. ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಹೊರಗಡೆಯಿಂದಲೇ ದರ್ಶನದ ವ್ಯವಸ್ಥೆ ಮಾಡಿದ್ದಾರೆ.

Edited By : Shivu K
PublicNext

PublicNext

19/09/2022 11:00 am

Cinque Terre

20.27 K

Cinque Terre

0