ಕಲಬುರಗಿ: ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಕಲಬುರಗಿ ಹೊರವಲಯದ ಜಾಫರಬಾದ್ ಕಾಲೋನಿಯಲ್ಲಿ ನಡೆದಿದೆ.
ಇಮ್ತಿಯಾಜ್ ಗೇಣಿ ಎಂಬ ದರೋಡೆಕೋರನ ಬಲಗಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದು, ಬಂಧಿಸಲು ಹೋದಾಗ ಪೊಲೀಸರ ಮೇಲೆ ಅಟ್ಯಾಕ್ ಗೆ ಮುಂದಾಗಿದ್ದ ಆರೋಪಿ ಮೇಲೆ ಪೊಲೀಸರು ತಮ್ಮ ಆತ್ಮರಕ್ಷಣೆಗೆ ಫೈರಿಂಗ್ ಮಾಡಿದ್ದಾರೆ.
ಒಟ್ಟು ಆರು ರಾಬರಿ ಪ್ರಕರಣದಲ್ಲಿ ಕಲಬುರಗಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಗುಲಬರ್ಗಾ ವಿಶ್ವವಿದ್ಯಾಲಯದ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
21/01/2025 09:46 pm