ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ESI ಆಸ್ಪತ್ರೆ ರೋಗಿಗಳಿಗೆ ಮತಾಂತರಕ್ಕೆ ಯತ್ನ, ಯುವಕ ವಿಚಾರಣೆ

ಕಲಬುರಗಿ: ಕೈಯಲ್ಲಿ ಬೈಬಲ್ ಹಿಡಿದು ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸಿದಂತಹ ಘಟನೆ ನಗರದ ಇಎಸ್ಐ ಆಸ್ಪತ್ರೆಯಲ್ಲಿ ನಡೆದಿದೆ.ಕೇರಳ ಮೂಲದ ಹೀನು ಎಂಬಾತನಿಂದ ಮತಾಂತರಕ್ಕೆ ಪ್ರಚೋದನೆ ನೀಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಗಂಭೀರವಾಗಿ ಆರೋಪಿಸಿದ್ದಾರೆ.

ESI ಆಸ್ಪತ್ರೆಯಲ್ಲಿ MBBS 3 ನೇ ವರ್ಷದ ವಿದ್ಯಾರ್ಥಿಯಾದ ಹೀನಾ ಎನ್ನುವ ಯುವಕನು ಕ್ರೈಸ್ತ ಧರ್ಮದ ಕರಪತ್ರಗಳನ್ನು ಕೈಯಲ್ಲಿ ಹಿಡಿದು ಪ್ರಚಾರ ಮಾಡುತ್ತಿದ್ದ.ಈ ವೇಳೆಯಲ್ಲಿ ಹಿಂದೂ ಕಾರ್ಯಕರ್ತರು ಆತನನ್ನು ಹಿಡಿದು ಕ್ರೈಸ್ತ ಧರ್ಮ ಪ್ರಚಾರದ ಜತೆ ಮಾತಾಂತರ ಮಾಡುತ್ತಿರೊದಾಗಿ ಆರೋಪಿಸಿ ಯುವಕನ್ನು ಗುಲಬರ್ಗಾ ವಿವಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಗುಲ್ಬರ್ಗಾ ವಿವಿ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

14/10/2024 07:07 pm

Cinque Terre

28.25 K

Cinque Terre

6