ಚಾಮರಾಜನಗರ:ಕೊಳ್ಳೆಗಾಲದಲ್ಲಿ ಪೊಲೀಸರು ಕಿಕ್ಕೇರಿಸೋ ಟಪ್ಪಾಂಗುಚ್ಚಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವರ್ಗಾವಣೆಗೊಂಡಿದ್ದ ಕೊಳ್ಳೇಗಾಳ ಠಾಣೆಯ ಸಿಪಿಐ ಶ್ರೀಕಾಂತ್, ಪಿಎಸ್‌ಐ ತಾಜುದ್ದೀನ್ ಹಾಗೂ ಅಶೋಕ್ ಅವರಿಗಾಗಿಯೇ ಗುಂಡಾಲ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.ಈ ಒಂದು ಸಮಾರಂಭದಲ್ಲಿಯೇ ಚುಟು ಚುಟು ಹಾಡಿಗೆ ಪೊಲೀಸರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಖಾಸಗಿಯಾಗಿಯೇ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳೂ,ಸಿಬ್ಬಂದಿಗಳು ಭಾಗಿ ಆಗಿದ್ದರು. ಸಖತ್ ಸ್ಟೆಪ್ಸ್ ಕೂಡ ಹಾಕಿದ್ದರು. ಈ ಸಂಭ್ರಮದಲ್ಲಿ ಭಾಗಿ ಆಗಿದ್ದ ಒಬ್ಬರು ಈ ವೀಡಿಯೋ ಕ್ಯಾಪ್ಚರ್ ಮಾಡಿದ್ದರು. ಅದು ಸಾಮಾಜಿಕ ತಾಣದಲ್ಲಿ ಶೇರ್ ಆಗಿ ವೈರಲ್ ಕೂಡ ಆಗಿದೆ.
ಈ ವೀಡಿಯೋ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನೂ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಭರವಸೆ ನೀಡಿದ್ದಾರೆ.
PublicNext
02/04/2022 01:16 pm