ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಸಲಹೆಗಾರರಾಗಿ ಅಮಿತ್ ಖರೆ ನೇಮಕ

ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ನೇಮಕಗೊಂಡಿದ್ದಾರೆ.

ಅಮಿತ್ ಖರೆ 1985ನೇ ಬ್ಯಾಚ್ ನ ಐಎಎಸ್ ಅಧಿಕಾರಿ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿ,ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಸೆಪ್ಟೆಂಬರ್ 30ರಂದು ನಿವೃತ್ತರಾಗಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕವಾಗಿದ್ದಾರೆ. ಕ್ಯಾಬಿನೆಟ್ ನ ನೇಮಕಾತಿ ಸಮಿತಿ ಅನುಮೋದನೆ ಮೆರೆಗೆ ಅಮಿತ್ ಖರೆ ಪ್ರಧಾನಿ ಸಲಹೆಗಾರರಾಗಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿ ಮತ್ತು ಸ್ಕೇಲ್ ನಲ್ಲಿ, ಗುತ್ತಿಗೆ ಆಧಾರದ ಅನ್ವಯ ಮತ್ತು ಇತರ ಸಾಮಾನ್ಯ ನಿಯಮಗಳಿಗೆ ಅನುಗುಣವಾಗಿ ಅವರ ನೇಮಕಾತಿ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಲ್ಲಿ ಅಮಿತ್ ಖರೆ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಮುನ್ನಡೆಸಿದ್ದರು. ಡಿಜಿಟಲ್ ಮಾಧ್ಯಮ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದರು.

Edited By : Nirmala Aralikatti
PublicNext

PublicNext

12/10/2021 07:35 pm

Cinque Terre

25.03 K

Cinque Terre

1

ಸಂಬಂಧಿತ ಸುದ್ದಿ