ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣಿವೆ ರಾಜ್ಯಕ್ಕೆ ಶೀಘ್ರವೇ ರಾಜ್ಯ ಸ್ಥಾನಮಾನ - ಅಮಿತ್ ಶಾ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ಶೀಘ್ರವೇ ರಾಜ್ಯದ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು. ನಾನು ಈ ಸದನದಲ್ಲಿ ಹೇಳಿದ್ದೇನೆ. ಮಸೂದೆಯು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕೆ ಧಕ್ಕೆ ತರುವುದಿಲ್ಲ ಎಂದು ಮತ್ತೊಮ್ಮೆ ಹೇಳುತ್ತೇನೆ. ಸರಿಯಾದ ಸಮಯಕ್ಕೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಶಾ ಹೇಳಿದರು.

ಸಂವಿಧಾನದ 370ನೇ ವಿಧಿ ರದ್ಧತಿ ವೇಳೆ ನೀಡಲಾಗಿದ್ದ ಭರವಸೆಗಳ ಬಗ್ಗೆ ಏನು ಮಾಡಿದ್ದಿರಿ ಎಂಬ ಪ್ರತಿಪಕ್ಷಗಳ ಟೀಕೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 370ನೇ ವಿಧಿ ರದ್ದುಪಡಿಸಿ 17 ತಿಂಗಳಾಗಿದೆ. ಅಷ್ಟರಲ್ಲಾಗಲೇ, ಅದರ ಬಗ್ಗೆ ಹೊಣೆ ಹೊರಲು ಒತ್ತಾಯಿಸುತ್ತಿದ್ದೀರಿ. 70 ವರ್ಷ ನೀವು ಏನು ಮಾಡಿದ್ರಿ? ಅದಕ್ಕೆ ನೀವು ಹೊಣೆ ಹೊತ್ತುಕೊಳ್ಳುವಿರಾ? ಎಂದು ತರಾಟೆಗೆ ತೆಗೆದುಕೊಂಡರು.

ನೀವು ಸರಿಯಾಗಿ ಕೆಲಸ ಮಾಡಿದ್ದರೆ, ನಮ್ಮನ್ನು ಕೇಳಬೇಕಾಗಿಲ್ಲ. ನನಗೆ ಯಾವುದೇ ಆಕ್ಷೇಪವಿಲ್ಲ, ಎಲ್ಲದಕ್ಕೂ ನಾನೇ ಹೊಣೆ ಹೊರುತ್ತೇನೆ. ಆದರೆ, ತಲೆಮಾರುಗಳವರೆಗೆ ಆಡಳಿತ ನಡೆಸಲು ಅವಕಾಶ ನೀಡಲ್ಪಟ್ಟವರು ಸರಿಯಾಗಿ ಆಡಳಿತ ನಡೆಸಿದ್ದಾರೆಯೇ ಎಂಬುದನ್ನು ಮನನ ಮಾಡಿಕೊಳ್ಳಬೇಕಾಗಿದೆ ಎಂದರು.

Edited By : Nirmala Aralikatti
PublicNext

PublicNext

13/02/2021 03:54 pm

Cinque Terre

56.89 K

Cinque Terre

4

ಸಂಬಂಧಿತ ಸುದ್ದಿ