ಬೆಂಗಳೂರು: ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯ್ ವಾಲಾ ಅಂಕಿತ ಹಾಕಿದ್ದಾರೆ. ಹೀಗಾಗಿ ಗೋಹತ್ಯೆ ನಿಷೇಧ ಕಾಯಿದೆಯು ಕಾನೂನಾಗಿ ಇಂದಿನಿಂದಲೇ ಜಾರಿಯಾಗಿದೆ.
ಈ ಕಾನೂನಿನ ಅಡಿ ಹತ್ಯೆಗಾಗಿ ಗೋ ಮಾರಾಟ ಮತ್ತು ಕೊಂಡುಕೊಳ್ಳುವಿಕೆಯನ್ನು ನಿರ್ಬಂಧಿಸಲಾಗಿದೆ. ಅಕಸ್ಮಾತ್ ನಿಯಮ ಮೀರಿದ್ದಲ್ಲಿ ಗೋವು ವಶಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ. 3 ವರ್ಷದಿಂದ 7 ವರ್ಷದರೆಗೆ ಜೈಲು ಹಾಗೂ 50ಸಾವಿರದಿಂದ 5ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
PublicNext
05/01/2021 08:38 pm