ಹಾವೇರಿ: ಉಕ್ರೇನ್ ನಲ್ಲಿ ಶೆಲ್ ಬಾಂಬ್ ದಾಳಿಗೆ ಸಾವನ್ನಪ್ಪಿದ ನವೀನ್ ಗ್ಯಾನಗೌಡ್ರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮುಂದೆ ಅಮಿತ್ ತಂದೆ ವೆಂಕಟೇಶ್ ಅಳಲು ತೋಡಿಕೊಂಡಿದ್ದು, ದಯಮಾಡಿ ನಮ್ಮ ಮಕ್ಕಳನ್ನು ಕರೆತನ್ನಿ. ನಮ್ಮ ನೋವು ನಮಗೆ ಗೊತ್ತು ನೀವು ಸುಮ್ಮನಿರಿ, ನಮ್ಮ ಕಷ್ಟ ನಮ್ಮಗೆ ಗೊತ್ತು ಎಂದು ಶಾಸಕರಿಗೆ ಬಾಯಿ ಮುಚ್ಚಿಸಿದ ಅಮಿತ್ ತಂದೆ ವೆಂಕಟೇಶ್.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಮಾಯಕ ವಿದ್ಯಾರ್ಥಿಯೋರ್ವ ಉಕ್ರೇನ್ ನಲ್ಲಿ ಬಲಿಯಾಗಿದ್ದಾನೆ. ಸಹಜವಾಗಿ ಪೋಷಕರಲ್ಲಿ ಆಕ್ರೋಶವಿದೆ. ಪಾರ್ಥೀವ ಶರೀರ ತರಿಸಿಕೊಡುವಂತೆ ಕೇಳಿಕೊಂಡಿದ್ದೇವೆ. ಜೈಶಂಕರ್ ಅವರ ಜೊತೆ ಮಾತನಾಡಿದ್ದೇನೆ. ಪಾರ್ಥೀವ ಶರೀರ ತರುವ ಪ್ರಕ್ರಿಯೆ ಆರಂಭಗೊಂಡಿದೆ. ಕೆಲ ಗಂಟೆಯಾದ್ರೂ ಯುದ್ಧ ನಿಲ್ಲಿಸಬೇಕೆಂದು ಆಗ್ರಹಿಸಿದ್ದೇವೆ. 12 ಸಾವಿರಕ್ಕೂ ಅಧಿಕ ಜನರನ್ನು ಕರೆತಂದಿದ್ದೇವೆ. ಕೊನೆ ವ್ಯಕ್ತಿಯೂ ಸುರಕ್ಷಿತವಾಗಿ ಬರಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಈಗಾಗಲೇ ಸರ್ವ ಪ್ರಯತ್ನ ನಡೆಸಿದ್ದೇವೆ, ಇದೊಂದು ಅನಿರೀಕ್ಷಿತ ಘಟನೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯರನ್ನು ಕರೆತರ್ತಿದ್ದೇವೆ. ಯುದ್ಧ ನಿಲ್ಲುವುದನ್ನು ಕಾಯುತ್ತಿದ್ದೇವೆ. ನಮ್ಮ ಮಕ್ಕಳನ್ನು ಕರೆತರುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸ್ತಿದೇವೆ. ಅಂದಾಜು ಇನ್ನೂ 8 ಸಾವಿರ ಜನರನ್ನು ಕರೆತರಬೇಕಿದೆ ಎಂದು ಅವರು ಹೇಳಿದರು.
ನವೀನ್ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಮತ್ತು ಪರಿಹಾರ ವಿಚಾರದ ಬಗ್ಗೆ ಮಾತನಾಡಿದ ಅವರು,ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ನವೀನ್ ಸಹೋದರ ವಿದ್ಯಾಭ್ಯಾಸ ಪೂರೈಸಲಿ, ಯಾವುದಾದರೂ ಕಂಪನಿಯಲ್ಲಿ ಕೆಲಸ ಕೊಡಿಸುವ ಕ್ರಮ ಕೈಗೊಳ್ಳಬೇಕು. ಈಗಿನ ಆದ್ಯತೆ ಸುರಕ್ಷಿತವಾಗಿ ಕರೆತರೋದು ನಮ್ಮ ಮೊದಲ ಆದ್ಯತೆ. ನಂತರ ಅವರ ಭವಿಷ್ಯದ ಬಗ್ಗೆ ಆಲೋಚಿಸ್ತೇವೆ ಎಂದು ಅವರು ಭರವಸೆ ನೀಡಿದರು.
PublicNext
02/03/2022 08:12 pm