ಚೆನ್ನೈ: ಕರಾಚಿ ಬಂದರು ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ 1971ರ ಯುದ್ಧ ವೀರ ಮತ್ತು ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿ ಮಹಾ ವೀರ ಚಕ್ರ ಪಡೆದಿದ್ದ ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ನಿನ್ನೆ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಗೋಪಾಲ್ ರಾವ್ ಅವರು ಡಿಸೆಂಬರ್ 4, 1971 ರಂದು ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ ಟಾಸ್ಕ್ ಗ್ರೂಪ್ ನ ಭಾಗವಾಗಿದ್ದ ಐಎನ್ಎಸ್ ಕಿಲ್ತಾನ್ ಮತ್ತು ಐಎನ್ಎಸ್ ಕಾಟ್ಚಾಲ್ ನ ಕಮಾಂಡರ್ ಆಗಿದ್ದರು. ಆ ದಾಳಿಯ ದಿನವನ್ನು ಈಗ ನೌಕಾಪಡೆಯ ದಿನವೆಂದು ಆಚರಿಸಲಾಗುತ್ತಿದೆ.
PublicNext
09/08/2021 03:47 pm