ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್-3 ದಂಪತಿ ಬೆಂಗಳೂರಿಗೆ ರಹಸ್ಯ ಭೇಟಿ : ಪ್ರಕೃತಿ ಚಿಕಿತ್ಸೆಗಾಗಿ ವಾಸ್ತವ್ಯ!

ಬೆಂಗಳೂರು: ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ 3 ದಂಪತಿ ಪ್ರಕೃತಿ ಚಿಕಿತ್ಸೆ ಹಿನ್ನೆಲೆ ಬೆಂಗಳೂರಿಗೆ ಮೊದಲ ಭಾರಿಗೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ಅಕ್ಟೋಬರ್ 27 ರಂದು ಬೆಂಗಳೂರಿಗೆ ಆಗಮಿಸಿದ್ದು, ಪ್ರಕೃತಿ ಚಿಕಿತ್ಸೆಗೆ ರಾತ್ರಿಯವರೆಗೆ ವೈಟ್‌ಫೀಲ್ಡ್‌ನಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ ಇದ್ದರು.

ಬೆಂಗಳೂರಿಗೆ ಅವರ ಆಗಮನವನ್ನು ರಹಸ್ಯವಾಗಿ ಇಡಲಾಗಿತ್ತು. ಅವರನ್ನು ನೇರವಾಗಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದು, ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಕೂಡ ಅಲ್ಲಿ ಅವರ ಜೊತೆಯಾಗಿದ್ದಾರೆ.

ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ 3 ದಂಪತಿ ದಿನಚರಿ ಆರಂಭಿಸಿದ್ದಾರೆ. ನಂತರ ಉಪಹಾರ ಮತ್ತು ಊಟ ಮಾಡುತ್ತಾರೆ. ಸ್ವಲ್ಪ ವಿರಾಮ ನಂತರ, ಎರಡನೇ ಸುತ್ತಿನ ಚಿಕಿತ್ಸೆಗಳು ಶುರುವಾಗುತ್ತವೆ. ರಾತ್ರಿ 9 ಗಂಟೆಗೆ ಊಟ ಮತ್ತು ಧ್ಯಾನದೊಂದಿಗೆ ಮುಕ್ತಾಯವಾಗುತ್ತದೆ. ಈ ಮಧ್ಯೆ ಕ್ಯಾಂಪಸ್‌ ಸುತ್ತಲೂ ಸುದೀರ್ಘ ನಡಿಗೆ, ಸಾವಯವ ಕೃಷಿ ಮತ್ತು ದನದ ಕೊಟ್ಟಿಗೆಗೆ ಭೇಟಿ ನೀಡುತ್ತಾರೆ.

ರಾಜರ ರಹಸ್ಯ ಭೇಟಿಯಿಂದಾಗಿ ಸೌಖ್ಯ ಹೆಲ್ತ್ ಸೆಂಟರ್ ಸುತ್ತ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ. ಈ ಹಿಂದೆಯು ಒಂದೆರಡು ಬಾರಿ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಂಡು ಪ್ರತಿದಿನ ಯೋಗ ಮಾಡುತ್ತಿದ್ದರು ಎನ್ನಲಾಗಿದೆ.

Edited By : Abhishek Kamoji
PublicNext

PublicNext

31/10/2024 07:58 am

Cinque Terre

48.22 K

Cinque Terre

1

ಸಂಬಂಧಿತ ಸುದ್ದಿ