ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: 112 ಪೊಲೀಸರಿಗೇನೆ ಉರಗ ರಕ್ಷಕನ ತುರ್ತುಸೇವೆ: ಹೆಬ್ಬಾವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನೆ

112 ಸಂಖ್ಯೆ ನಿಮಗೆಲ್ಲಾ ಗೊತ್ತೇ ಇದೆ. ಪೊಲೀಸ್ ಇಲಾಖೆಯ ತುರ್ತು ಸೇವೆ ಒದಗಿಸುವ 112 ದೂರವಾಣಿ ನಂಬರ್ ಗೆ ಕರೆ ಮಾಡಿದ್ರೆ ಸಾಕು, ಯಾವುದೇ ತೊಂದರೆಯಲ್ಲಿದ್ರೂ ಸಹ ತಕ್ಷಣಕ್ಕೆ ನಿಮ್ಮ ಹತ್ತಿರ 112 ವಾಹನ ಸಮೇತ ಪೊಲೀಸ್ ಸಿಬ್ಬಂದಿ ತಂಡ‌ ಹಾಜರಿರುತ್ತೆ. ಆದರೆ ಗದಗ ಜಿಲ್ಲೆಯಲ್ಲಿ 112 ಪೊಲೀಸ್ ಸಿಬ್ಬಂದಿ ತಂಡಕ್ಕೇ‌ನೆ ತುರ್ತು ಸೇವೆ ಕೇಳೋ ಟೈಂ ಒದಗಿ ಬಂದಿದೆ.

ಹೌದು….ತಡರಾತ್ರಿ 112 ಪೊಲೀಸರು ಗಸ್ತಿನಲ್ಲಿದ್ದಾಗ, ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿನ ಪುಟ್ಟರಾಜರ ಪುತ್ಥಳಿ ಸಮೀಪ, ಹೆದ್ದಾರಿ ಮೇಲೆ ಹೆಬ್ಬಾವು (ಕೊಳಕುಮಂಡಲ ಹಾವು) ಕಾಣಿಸಿಕೊಂಡಿದೆ.ಇದನ್ನು ಕಂಡ 112 ಪೊಲೀಸ್ ಸಿಬ್ಬಂದಿಗೆ ತುರ್ತು ಸೇವೆಗೆಂದು ಉರಗ‌ ರಕ್ಷಕನ‌ ಅವಶ್ಯಕತೆ ಬಿದ್ದಿದೆ. ತಕ್ಷಣ ನರಗುಂದದಲ್ಲೇ ಇರೋ ಉರಗ ರಕ್ಷಕ ಬುಡ್ನೇಸಾಬ್ ನನ್ನ ಸ್ವತಃ ಪೊಲೀಸರೇ ಸ್ಥಳಕ್ಕೆ ಕರೆದುಕೊಂಡು‌ ಬಂದಿದ್ದಾರೆ.

ಹೆದ್ದಾರಿ ಇರೋದ್ರಿಂದ ವಾಹನಗಳು ಹಾವಿನ ಮೇಲೆ ಹಾದು ಹೋಗದಂತೆ‌ ಬುಡ್ನೇಸಾಬ ಬರೋವರೆಗೂ ಕೆಲಸಮಯ ವಾಹನಗಳಿಗೆ ಪೊಲೀಸರು ಬ್ರೆಕ್ ಹಾಕಿದ್ದಾರೆ.ನಂತರ ಸ್ಥಳಕ್ಕಾಮಿಸಿದ ಬುಡ್ನೆಸಾಬ ಹಾವನ್ನ ರಕ್ಷಣೆ ಮಾಡಿದ್ದಾರೆ. ಪೊಲೀಸರ‌ ತುರ್ತುಕರೆ ಮೂಲಕ ಸ್ಥಳಕ್ಕಾಗಮಿಸಿದ ಬುಡ್ನೇಸಾಬ ಹಾವನ್ನ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ಇನ್ನು ಈ ಉರಗಕ್ಕೆ ದಾಸರ ಹಾವು, ಕೊಳಕು‌ ಮಂಡಲ ಹಾವು ಇಂಗ್ಲೀಷ್ ನಲ್ಲಿ ರಸ್ಸೆಲ್ ವೈಪರ್ ಎಂದೂ ಕರೆಯುತ್ತಾರೆ. ಭಾರತ ದೇಶದಲ್ಲಿ ಅತ್ಯಂತ ವಿಷಕಾರಿ‌ ಹಾವುಗಳಲ್ಲಿ ಈ‌ ಹಾವು ಐದನೇ ಸ್ಥಾನದಲ್ಲಿದ್ದು, ಇದರಲ್ಲಿ ಹಿಮೋಟೋಕ್ಸಿನ್ ವಿಷ ಇರುತ್ತದೆ. ಒಂದು ಸಾರಿ ಹಾವು ಮನುಷ್ಯನಿಗೆ ತನ್ನ ನಾಲಿಗೆ ಸ್ಪರ್ಶ ಮಾಡಿದಲ್ಲಿ, ಮನುಷ್ಯನ ಮಾಂಸವನ್ನೇ ಕೊಳೆಯುವಂತೆ ಮಾಡಿ, ರಕ್ತ ನೀರಾಗಿ, ಮನುಷ್ಯ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತೆ.

Edited By :
PublicNext

PublicNext

01/10/2022 03:59 pm

Cinque Terre

32.35 K

Cinque Terre

0