ಗದಗ: ಮುಂಬರುವ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷವು ಲಂಬಾಣಿ ಸಮುದಾಯಕ್ಕೆ ಆಧ್ಯತೆ ನೀಡಬೇಕು. ಪ್ರತಿ ಚುನಾವಣೆಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡದೇ ಕಾಂಗ್ರೆಸ್, ಪಕ್ಷ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಶೇಟ್ಟಿಕೆರಿ ಗ್ರಾಮದ ದೀಪಕ ಲಮಾಣಿ ಹೇಳಿದರು.
ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂಜಾರ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2013 ರಲ್ಲಿ ಸ್ಥಳೀಯ ಲಂಬಾಣಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಪಕ್ಷದ ವರಿಷ್ಟರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದಾಜು 25 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಲಂಬಾಣಿ ಸಮುದಾಯಕ್ಕೆ ಬಹುತೇಕ ಶಿರಹಟ್ಟಿ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯ ಹೊಂದಿದೆ. ಕ್ಷೇತ್ರದಲ್ಲಿ ಲಂಬಾಣಿ ಮತದಾರರೇ ಹೆಚ್ಚು ನಿರ್ಣಾಯಕ ಎಂಬುದನ್ನು ಕಾಂಗ್ರೆಸ್ ಪಕ್ಷದ ಪರಿಷ್ಟರು ಅರಿತುಕೊಂಡು ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಿ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಲಂಬಾಣಿ ಕ್ಷೇತ್ರ ಸಮಾಜ ಅತ್ಯಂತ ನಿರ್ಣಾಯಕವಾಗಿದ್ದು, ಬರಲಿರುವ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಂಜಾರಾ ಸಮಾಜಕ್ಕೆ ನೀಡಬೇಕು ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರ ವರ್ಷಗಳಿಂದ ದುಡಿಯುತ್ತಿರುವ ದೀಪಕ ಲಮಾಣಿ ಅವರಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಹಲವು ದಶಕಗಳಿಂದ ನಾನು ಕಾಂಗ್ರೆಸ್ ಪಕ್ಷದ ಸಿಸ್ತಿನ ಸಿಪಾಯಿಯಾಗಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿ
ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಜನರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಪಕ್ಷಕ್ಕೆ ಸಲ್ಲಿಸಿದ ಸೇವೆ ಹಾಗೂ ಬಂಜಾರಾ ಸಮಾಜದ ಪ್ರತಿನಿಧಿಯಾಗಿ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡ ಪಕ್ಷದ ಗೆಲುವಿಗೆ ಪಕ್ಷದ ವರಿಷ್ಟರು ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಂಜಾರ ಸಮಾಜದ ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ತತ್ವನಿಷ್ಟೆಗಳಿಗೆ ಬಂಜಾರ ಸಮುದಾಯ ಎಲ್ಲ ಸಂದರ್ಭಗಳಲ್ಲಿ ತತ್ವನಿಷ್ಟೆ ವ್ಯಕ್ತಪಡಿಸಿದೆ. ಪ್ರತಿ ತಾಂಡಾಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಪಕ್ಷವನ್ನು ಸದೃಡಗೊಳುವಲ್ಲಿ ಸಾಕಷ್ಟು ಶ್ರಮವಹಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅಧಿಕಾರ ಇಲ್ಲದೇ ಇರುವ ಸಂದರ್ಭದಲ್ಲಿ ಕಾರ್ಯಕರ್ತರು ವಿಚಲಿತರಾಗದೇ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.
ಸಂದರ್ಭದಲ್ಲಿ ದೇವಪ್ಪ ಲಮಾಣಿ, ಅಕ್ಕಿಗುಂದ , ಸೋಮು ಲಮಾಣಿ, ಹರದಗಟ್ಟಿ, ಮಹೇಶ ಲಮಾಣಿ, ರಮೇಶ ಲಮಾಣಿ ಉದ್ದೇಶಿಸಿ ಮಾತನಾಡಿದರು.
( ಅಕ್ಕಿಗುಂದ),ದೇವಪ್ಪ ಲಮಾಣಿ (ಅಕ್ಕಿಗುಂದ), ಗಣೇಶ ಲಮಾಣಿ (ದೊಡ್ಡೂರ),ರಮೇಶ ಲಮಾಣಿ ( ಉಳ್ಳಟ್ಟಿ),ಹನುಮಂತ ಕಾರಭಾರಿ( ಅಡರಕಟ್ಟಿ), ಬಸವರಾಜ ಲಮಾಣಿ,( ಉಂಡೇನಹಳ್ಳಿ),ವಿಜಯ ಲಮಾಣಿ, ಸೂರಣಗಿ,ರುದ್ರಪ್ಪ ಲಮಾಣಿ, ಕುಂದ್ರಳ್ಳಿ,ಮಂಜು ಲಮಾಣಿ, ಸೂವರ್ಣಗಿರಿ ತಾಂಡಾ, ಶೇಖರ ಲಮಾಣಿ, ಉಂಡೇನಹಳ್ಳಿ, ಶೇಖಪ್ಪ ಲಮಾಣಿ ಅಕ್ಕಿಗುಂದ, ಮೋಹನ್ ಲಮಾಣಿ, ಸೂವರ್ಣಗಿರಿ ತಾಂಡಾ
ಮಾನಪ್ಪ ಲಮಾಣಿ, ಹರದಗಟ್ಟಿ ಉಪಸ್ಥಿತರಿದ್ದರು.
Kshetra Samachara
13/10/2022 05:07 pm