ಗದಗ: ಪಿಎಫ್ಐ ಕಾರ್ಯಕರ್ತರ ಬಂಧನ ವಿಚಾರಕ್ಕೆ ಗದಗದಲ್ಲಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ್ ಅವರು ಕಾನೂನು ತನ್ನ ಕ್ರಮವನ್ನು ಕೈಗೊಳ್ಳುತ್ತೇ, ಅಧಿಕಾರಿಗಳಿಗೆ ಫ್ರೀ ಆ್ಯಂಡ್ ಇದೆ. ಕಾನೂನು ಕೈಗೆ ತೆಗೆದುಕೊಳ್ಳುವರು, ಸಮಾಜದ ಸ್ವಾಸ್ಥ್ಯ ಕೆಡಿಸುವಂತವರಿಗೆ ಸೂಕ್ತ ಶಿಕ್ಷೆಯನ್ನು ಕೇಂದ್ರ ಸರ್ಕಾರ ನೀಡುತ್ತೆ.
ಭೀಕರವಾದ ಮಾಹಿತಿಗಳು ಹೊರ ಬರುತ್ತವೆ. ಪ್ರಧಾನಿ ಹತ್ಯೆ ಸೇರಿದಂತೆ ಹಲವು ಮಾಹಿತಿ ಹೊರ ಬರುತ್ತವೆ. ಅಂತಹ ಪಿಎಫ್ಐ ಕಾರ್ಯಕರ್ತರನ್ನು ಅಂದು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು. ಹಿಂದು ಕಾರ್ಯಕರ್ತರ ಕೊಲೆಯಾದಾಗ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಬಿಡುಗಡೆ ಮಾಡಿದ್ರು.
ಇದು ಕಾಂಗ್ರೆಸ್ ಪಕ್ಷದ ಸುಂದರ ಪ್ರಜಾಪ್ರಭುತ್ವ ಎಂದು ಸಚಿವ ಸಿ.ಸಿ ಪಾಟೀಲ್ ವ್ಯಂಗ್ಯವಾಡಿದ್ರು. ಇನ್ನು ಯಡಿಯೂರಪ್ಪರವರ ಹೆಸರನ್ನು ಮೀಸಲಾತಿಯಲ್ಲಿ ತೆಗೆದುಕೊಂಡಿದ್ದು ಖಂಡನೀಯ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಡಬಾರದು ಎನ್ನುವದು ಬಿ.ಎಸ್.ವೈ ಹೇಳಿಲ್ಲ. ಬಿಎಸ್‌ವೈ ನಮ್ಮನ್ನು ಗುರುತಿಸಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ್ದಾರೆ.
ಮೂರು ಜನ್ರು ಮಂತ್ರಿಮಂಡಲದಲ್ಲಿ ಇದ್ದೇವೆ. ಸಮಸ್ಯೆ ಇರೋದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಗೊತ್ತಿದೆ.ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಇದೆ ಎಂದ್ರು.
PublicNext
27/09/2022 08:43 pm