ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅನರ್ಹರನ್ನು ಕಿತ್ತು ಬೀಸಾಕ್ರಿ, ನನ್ಗೆ ಕಮ್ಮಿ ವೋಟ್ ಬಿದ್ರೂ ಚಿಂತೆ ಇಲ್ಲ

ಗದಗ: ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಚಾರವಾಗಿ ಗದಗನಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಯರೇಬೇಲೇರಿ ಗ್ರಾಮದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ‌ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ ಪಾಟೀಲ ತೆರಳಿದಾಗ ಅಲ್ಲಿನ ಮಹಿಳೆಯರು, ನಮಗೆ ನಿವೇಶನ ನೀಡಿಲ್ಲ. ಪಟ್ಟಾನೆ ಬುಕ್ ಆಗಿಲ್ಲ ಅಂತ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ ಪಿಡಿಓಗೆ ಹಾಗೂ ಹಿರಿಯ ಅಧಿಕಾರಿಗಳಿಗೆ‌ ಖಡಕ್ ಸೂಚನೆ ಕೊಟ್ಟಿದ್ದಾರೆ.

"ಅನರ್ಹ ಫಲಾನುಭವಿಗಳಿದ್ದರೆ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿ. ಯಾರೇ ಆಗಲಿ ಅವ ಬೇಕಾದ್ದಂತ ಪವರ್ ಫುಲ್ ಇರಲಿ, ಬೇಕಾದ್ದಂತಹ ಪಾರ್ಟಿ ಇರಲಿ. ನನಗೇನು ಹತ್ತು ವೋಟ್ ಕಮ್ಮಿ ಬಿದ್ರೂ ಸಹ ನಾ ತಲೆಕೆಡಿಸಿಕೊಳ್ಳಲ್ಲ. ಬೇರೇ ಊರಲ್ಲಿ ಹತ್ತು ವೋಟ್ ಜಾಸ್ತಿ ತಗೋತೀನಿ. ಇಲ್ಲಿ ರಾಜಕಾರಣ ಇದೆ. ಆ ರಾಜಕಾರಣಕ್ಕೆ ಬಗ್ಗಬೇಡಿ, ಅರ್ಹ ಫಲಾನುಭವಿಗಳಿಗೆ ಸೇರಿಸಿ ಲಿಸ್ಟ್ ಕಳಿಸಿ. ಅನರ್ಹ ಫಲಾನುಭವಿಗೆ ಸೇರಿಸಿದ್ರೆ ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಕೇಸ್ ಬುಕ್ ಮಾಡ್ತಿನಿ" ಎಂದು ಗ್ರಾಮಸ್ಥರ ಎದುರಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

Edited By : Nagesh Gaonkar
PublicNext

PublicNext

18/09/2022 04:59 pm

Cinque Terre

25.41 K

Cinque Terre

0

ಸಂಬಂಧಿತ ಸುದ್ದಿ