ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬಗರ್ ಹುಕುಂ ಸಾಗುವಳಿದಾರರಿಂದ ಬೃಹತ್ ಪಾದಯಾತ್ರೆ

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಗರ್ ಹುಕುಂ ಸಾಗುವಳಿದಾರರ ಹಕ್ಕೊತ್ತಾಯಕ್ಕಾಗಿ ಕಪ್ಪತ್ತಗುಡ್ಡದಿಂದ ಜಿಲ್ಲೆಯ ಶಿರಹಟ್ಟಿ ತಾಲೂಕಿನಿ ಕಡಕೋಳ ಗ್ರಾಮದಿಂದ ಕಪ್ಪತ್ತಗುಡ್ಡದವರಿಗೆ ಬೃಹತ ಪಾದಯಾತ್ರೆ ನಡೆಯಿತು.

ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಕಡಕೋಳ ಗ್ರಾಮದಿಂದ ಕಪ್ಪತ್ತಗುಡ್ಡದವರೆಗೆ ಪಾದಯಾತ್ರೆ ಜರುಗಿತು. ಸರಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡದೆ ಸದಾ ಸತಾಯಿಸುತ್ತಿದೆ. ಹೀಗಾಗಿ ಕಪ್ಪತ್ತಗುಡ್ಡದಿಂದ ಬೃಹತ್ ಪಾದಯಾತ್ರೆ ಮಾಡಲಾಯಿತು. ಇನ್ನೂ ಕಪ್ಪತ್ತಗುಡ್ಡ ಅಂಚಿನಲ್ಲಿ ಅಕ್ರಮವಾಗಿ ಮರಳು ದಂಧೆ, ಕಲ್ಲು ಗಣಿಗಾರಿಕೆ ಗಿಡ ಮರಗಳ ಕಳ್ಳತನ ದಂಧೆ ನಡೆಯುತ್ತಿದೆ. ಇನ್ನೂ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ನಿರಂತರ ದೌರ್ಜನ್ಯ ಎಸಗಲಾಗುತ್ತಿದೆ. ಇದರಿಂದ ರೈತರು ಸೇರಿಕೊಂಡು ಬೃಹತ ಪಾದಯಾತ್ರೆ ನಡೆಸಿದರು.

ಇದೀಗ ನಮಗೆ ನ್ಯಾಯ ಕೊಡಿ ಹಕ್ಕುಪತ್ರ ಕೊಡಿ ಅಂತಾ ಶಿರಹಟ್ಟಿ ತಹಶೀಲ್ದಾರ ಕಚೇರಿ ಮುಂದೆ ಅಹೋರಾತ್ರಿ ಧರಣಿಗೆ ನಿರ್ಧಾರ ಮಾಡಲಾಯಿತು. ಇನ್ನೂ ಜಿಲ್ಲಾದ್ಯಾಂತ ಬಗರ್ ಹುಕುಮ್ ಸಾಗುವಳಿದಾರರ ಮೇಲೆ ಹಾಕಿರುವ ಕೇಸಗಳನ್ನು ಹಿಂಪಡೆಯಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಕ್ಕಳು ಮಹಿಳೆಯರು ರೈತರು ಭಾಗವಹಿಸಿದರು.

Edited By : Manjunath H D
PublicNext

PublicNext

12/09/2022 05:06 pm

Cinque Terre

18.43 K

Cinque Terre

0

ಸಂಬಂಧಿತ ಸುದ್ದಿ