ಗದಗ : ಸಿಎಂ ಸಿದ್ಧರಾಮಯ್ಯ ಪರ ಜಿ ಟಿ ದೇವೇಗೌಡ ಬ್ಯಾಟಿಂಗ್ ವಿಚಾರವಾಗಿ, ಗದಗನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೂ ತೆರಳುವ ಮುನ್ನ ನಗರದ ನೀರಿಕ್ಷಣಾ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಸಿಎಂ ಸಿದ್ದರಾಮಯ್ಯ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗಜ್ಜಾಹೀರಾಗಿದೆ, ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬುದ್ಧಿಮಾತು ಹೇಳಿದ್ರು.
ನಾವು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ, ನಮಗೆ ಸಂಸ್ಕಾರ ಇದೆ,ಸಿಎಂ ಅವರೇ ಆತ್ಮಸಾಕ್ಷಿ ಅಂತಾ ಹೇಳಿದ್ರು.ಅದು ಕಾಮೆಂಟ್ ಆಗ್ತಿದೆ. ಶಾಸನ ಸಭೆಯಲ್ಲಿ ಸೈಟ್ ವಾಪಸ್ಸ ಕೊಡಬೇಕಾಗಿತ್ತು.ಆರ್ ಅಶೋಕನದು ಹಿಡ್ಕೊಂಡಿದ್ದೀರಿ.
ಈ ಪ್ರಕರಣಕ್ಕೆ ಏನು ಸಂಬಂಧ. ಆರ್ ಆಶೋಕ ಆಗಲೇ ವಾಪಸ್ಸ್ ನೀಡಿದ್ರು, ನೀವು ಆವಾಗಲೇ ಮಾಡಬೇಕಾಗಿತ್ತು ಎಂದು ಹೇಳಿದ್ರು.ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು. ಔಷಧಿ ಇಲ್ಲದ ಹಾಗೇ ಮಾಡಿಕೊಂಡಿದ್ದಾರೆ. ಕಾನೂನು ಇದೆ, ಕಾನೂನು ಯಾವ ರೀತಿ ಕ್ರಮ ಕೈಗೊಳ್ಳತ್ತೆ ನೋಡೋಣ ಎಂದರು.
ಆರ್ ಅಶೋಕ್ ಅವರೂ ಸೈಟ್ ಹಿಂತಿರುಗಿಸಿರುವ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ, ಉತ್ತರಿಸಿ, ಎತ್ತಣ ಮಾಮರ ಎತ್ತಣ ಕೋಗಿಲೆ, ಯಾವದನ್ನು ಯಾವುದಕ್ಕೆ ಹೋಲಿಕೆ ಮಾಡುತ್ತಿರಿ. ಆರ್ ಅಶೋಕ ಸೈಟ್ ಮರಳಿ ನೀಡಿದಾಗ ಪ್ರಕರಣ ಕೋರ್ಟ್ ಗೆ ಹೋಗಿರಲ್ಲಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನಡುವಳಿಕೆ ದಿನಾ ಒಂದೊಂದು ತರ ಆಗ್ತಾಯಿದೆ.
ಬೆಕ್ಕಿಗೆ ಗಂಟೆ ಕಟ್ಟವವರು ಯಾರು, ನಾವು ನೀವು ಕಟ್ಟಲು ಆಗುತ್ತಾ.ಇದು ಸಿಎಂ ಅವರೇ ಮಾಡಿಕೊಂಡಿರುವ ಕಾಯಿಲೆ, ನೀವೇ ಕೆರೆದುಕೊಂಡಿರುವ ಹುಣ್ಣು, ಅದಕ್ಕೆ ನೀವೇ, ಔಷಧಿ ಹಚ್ಚಿಕೊಳ್ಳಬೇಕು. ಈವಾಗ ರಾಜೀನಾಮೆ ನೀಡಿ, ನೀವು ತಪ್ಪಿತಸ್ಥರು ಅಲ್ಲಾ ಅಂದ್ರೆ ನೀವೇ ಸಿಎಂ ಆಗಿ ಎಂದರು.
PublicNext
04/10/2024 03:52 pm