ನರಗುಂದ: ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಇಂದು ಮಾಧ್ಯಮದ ಜತೆ ಮಾತನಾಡಿ, ರಾಜ್ಯದ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯ ನಿರ್ವಹಣೆಯಲ್ಲಿ ಅಸಮರ್ಥರು ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಲಾಠಿ ಪ್ರಹಾರ ಖಂಡಿಸಿ ಮಾತನಾಡಿದ ಸಿ.ಸಿ.ಪಾಟೀಲ್, ಲಾಠಿ ಪ್ರಹಾರ ಮಾಡಿಸಿದ್ದು ಖಂಡನೀಯ. ಈ ರೀತಿ ಮಾಡಿದ್ದು ತಪ್ಪು. ಪಾಕಿಸ್ತಾನಕ್ಕೆ ಜೈ ಎಂದವರನ್ನು ಫ್ರೀಯಾಗಿ ಬಿಟ್ಟರು. ಇದು ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಮಾಡಿದ ಲಾಠಿ ಪ್ರಹಾರ. ಗೃಹಮಂತ್ರಿ ಸಮರ್ಥರಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹರಿಹಾಯ್ದರು.
PublicNext
16/12/2024 07:16 am