ನರಗುಂದ: ಬೆಳಗಾವಿ ಅಧಿವೇಶನ ಸಮಯದಲ್ಲಿ ನಡೆದ ಲಾಠಿ ಪ್ರಹಾರ ಖಂಡಿಸಿದ ಶಾಸಕರಾದ ಸಿ.ಸಿ.ಪಾಟೀಲ್, ಲಾಠಿ ಪ್ರಹಾರ ಮಾಡುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ನಿಯಮಗಳನ್ನು ತಿಳಿಸಿ ನಂತರ ಲಾಠಿ ಪ್ರಹಾರ ಮಾಡಬೇಕು. ಆದರೆ ಅಲ್ಲಿನ ಐಡಿಜಿಪಿಗೆ ಇದರ ಬಗ್ಗೆ ಅರಿವೇ ಇರಲಿಲ್ಲ. ನಿಯಮ ಮೀರಿ ಲಾಠಿ ಪ್ರಹಾರ ಮಾಡಿದ್ದಾರೆ ಎಂದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಾಠಿ ಪ್ರಹಾರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮಾಡಿದ ಕುತಂತ್ರ. ಇದನ್ನು ನಾವು ಖಂಡಿಸುತ್ತೇವೆ ಎಂದರು. ಅಲ್ಲದೇ ನಾಳೆ ನಡೆಯುವ ಬೆಳಗಾವಿ ಅಧಿವೇಶನದ ಸಮಯದಲ್ಲಿ ಲಾಠಿ ಪ್ರಹಾರ ಮಾಡಿಸಿದ ಪೊಲೀಸರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪೂಜ್ಯ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಿಲ್ಲಾ ಅಧಿಕಾರಿಗಳ ಆವರಣದಲ್ಲಿ ಸತ್ಯಾಗ್ರಹ ಮಾಡುತ್ತಾರೆ. ಅವರ ಸತ್ಯಾಗ್ರಹಕ್ಕೆ ನಮ್ಮ ಎಲ್ಲರ ಬೆಂಬಲವಿದೆ. ನಾವು ಮೀಸಲಾತಿ ಪಡೆದೇ ತೀರುತ್ತೇವೆ ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಸಿ.ಸಿ.ಪಾಟೀಲ್ ತಿಳಿಸಿದರು
ಮಲ್ಲಿಕಾರ್ಜುನ, ಪಬ್ಲಿಕ್ ನೆಕ್ಸ್ಟ್, ನರಗುಂದ
PublicNext
16/12/2024 05:19 pm