ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಮಠದ ಆವರಣದಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಸಂಜೆ ಸುರಿದ ಭಾರಿ ಮಳೆಗೆ ಮಠದ ಆವರಣ ಕೆರೆಯಂತಾಗಿದೆ. ಊರಿನ ಸುತ್ತಲು ರಸ್ತೆಯಿಂದ ಹರಿದು ಬಂದ ಮಳೆಯ ನೀರಿನಿಂದ ಮೂರು ಫೀಟ್ ನಷ್ಟು ಎತ್ತರಕ್ಕೆ ಮಳೆಯ ನೀರು ನಿಂತಿದೆ.ಕಿರಿದಾದ ಗಟಾರುಗಳಿಂದಾಗಿ ಸರಾಗವಾಗಿ ಮಳೆ ನೀರು ಹರಿಯಲು ದಾರಿಯಿಲ್ಲದೇ ಆವರಣಕ್ಕೆ ಮಳೆಯ ನೀರು ನುಗ್ಗಿದೆ .
ಮಳೆಯ ನೀರಿನಿಂದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೂ ಜಲ ದಿಗ್ಭಂದನವಾಗಿದೆ ಮಠದದಿಂದ ಆಚೆಗೆ ಬಾರದ ಸ್ಥಿತಿಯಲ್ಲಿ ಭಕ್ತರು ಹಾಗೂ ಮಠದ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ.
PublicNext
06/10/2022 08:19 pm