ಗದಗ: ಗದಗ ಜಿಲ್ಲೆಯಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಬೆಣ್ಣೆಹಳ್ಳದ ದಡದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ಸಮೀಪ ಮೊಸಳೆ ಕಾಣಿಸಿಕೊಂಡಿದೆ.
ಮಲಪ್ರಭಾ ನದಿ ಪ್ರವಾಹ ಕಡಿಮೆ ಆದ ಬೆನ್ನಲ್ಲೇ ಮೊಸಳೆ ಪ್ರತ್ಯಕ್ಷಗೊಂಡಿದೆ.ಮೊಸಳೆ ಕಾಣಿಸಿಕೊಂಡದ್ದನ್ನ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬೆಣ್ಣೆಹಳ್ಳದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮೊಸಳೆ ಪ್ರತ್ಯಕ್ಷದ ಸುದ್ದಿ ಆತಂಕ ಹುಟ್ಟಿಸಿದೆ.
ಇನ್ನು ಮೊಸಳೆ ಹಳ್ಳದ ಹತ್ತಿರ ಇರುವ ಗ್ರಾಮಗಳಲ್ಲಿ ಗ್ರಾಮಸ್ಥರು ತಮ್ಮ ಪಶುಗಳನ್ನು ಕರೆದುಕೊಂಡು ಹಳ್ಳದ ಹತ್ತಿರ ಹೋಗದಂತೆ ಡಂಗುರ ಸಾರಲಾಗುತ್ತಿದೆ. ಮುಂಜಾಗೃತ ಕ್ರಮ ವಹಿಸಿ ಸುರಕ್ಷತೆಗೆ ಒತ್ತು ನೀಡಬೇಕೆಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
18/09/2022 04:01 pm