ಗದಗ: ತುಕ್ಕು ಹಿಡಿದಿದ್ದ ಬೀದಿಲೈನ್ ತಂತಿಯೊಂದು ತುಂಡಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ನಗರದ ಕೈಲಾಸ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿ ನಡೆದಿದೆ.
ಮೂಲತ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ 60 ವರ್ಷದ ಸುಶೀಲಾ ಎಂಬ ಮಹಿಳೆಯೇ ಮೃತಪಟ್ಟ ದುರ್ಧೈವಿ. ಮೃತ ಮಹಿಳೆ ಪಿಜಿ ಸೆಂಟರನಲ್ಲಿ ಸಹೋದರಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಪಿಜಿ ಸೆಂಟರ್‌ನಿಂದ ಹೊರ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮೊದಲೇ ವಿದ್ಯುತ್ ತಂತಿ ತುಕ್ಕು ಹಿಡಿದಿತ್ತು, ಹೀಗಾಗಿ ಗಾಳಿಯಿಂದ ತುಂಡಾಗಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸುದ್ದಿ ತಿಳಿದು ಬೆಟಗೇರಿ ಬಡಾವಣೆ ಪೊಲೀಸರು ಪರಿಶೀಲನೆ ನಡೆಸಿದರು.
PublicNext
14/09/2022 05:20 pm