ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ಇದೀಗ ಪ್ರವಾಹದ ಭೀತಿ ಶುರುವಾಗಿದೆ. ನಿರಂತರ ಮಳೆಯಿಂದಾಗಿ ನವಿಲು ತೀರ್ಥ ಡ್ಯಾಂನಿಂದ 12,500 ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಹೀಗಾಗಿ ಮಲಪ್ರಭಾ ನದಿಯ ಪ್ರವಾಹ ಹೆಚ್ಚಾಗಿದ್ದು ಒಂದೊಂದೇ ಸೇತುವೆ ಜಲಾವೃತಗೊಳ್ಳುತ್ತಿವೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಸೇತುವೆ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದೆ.
ಹೊಳೆ ಆಲೂರಿನಿಂದ ಬಾದಾಮಿ ಸಂಪರ್ಕಿಸುವ ಸೇತುವೆಯೂ ಮುಳುಗಡೆಯಾಗಿದೆ. ಇದರಿಂದ ಹೊಳೆಆಲೂರು ಬಾದಾಮಿ ಸಂಪರ್ಕ ಸ್ಥಗಿತಗೊಂಡಿದ್ದು, ಮಲಪ್ರಭಾ ನದಿಯ ಪ್ರವಾಹಕ್ಕೆ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
PublicNext
14/09/2022 04:41 pm