ಗದಗ: ಭಾರತೀಯ ಜನತಾ ಪಾರ್ಟಿ ಶಿರಹಟ್ಟಿ ಮಂಡಳ ಹಾಗೂ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರ ಯುವ ಮೋರ್ಚಾ ಹಾಗೂ ಡಾ.ಚಂದ್ರು ಲಮಾಣಿ ಬಾಲಾಜಿ ಆಸ್ಪತ್ರೆ ಇವರ ಸಹಯೋಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾಪಾಕ್ಷಿಕ ಅಭಿಯಾನದ ಕ್ಷಯ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಮುಂದಾಗಿವೆ. ಇದರ ಜತೆಗೆ ಸಾರ್ವಜನಿಕರು ಕೂಡಾ ಕ್ಷಯದ ಲಕ್ಷಣ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಡಾ"ಚಂದ್ರು ಲಮಾಣಿ ಅವರ 60 ಕ್ಷಯ ರೋಗಿಗಳಿಗೆ ಉಚಿತ ವಾಗಿ ಆಹಾರ ಕಿಟ್ಟು ಕೊಟ್ಟಿರುವುದು ಉತ್ತಮ ಕಾರ್ಯವಾಗಿದೇ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ,ಚಂದ್ರು ಲಮಾಣಿ ಅವರು ಕ್ಷಯ ರೋಗವಿರುವ 40ಜನಗಳನ್ನು ಅವರಿಗೆ ಅರೋಗ್ಯಕ್ಕೆ ಔಷದಿ ಬೇಕು ಅದನ್ನು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳು ತ್ತೇವೆ 40ಜನರನ್ನು ದತ್ತಕ್ಕೆ ತೊಗೊಂಡು ಅವರ ಖರ್ಚುನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಪಾಟೀಲ ಮಾಜಿ ಪುರಸಭೆ ಅಧ್ಯಕ್ಷರಾದ ಎಮ್.ಆರ್ ಪಾಟೀಲ ವಿಜಯಕುಮಾರ ಹತ್ತಿಕಾಳ ರಮೇಶ ದನದಮನಿ ಶಕ್ತಿ ಕತ್ತಿ ಗಿರೀಶ ಚೌರಡ್ಡಿ ಚಂದ್ರು ಮಾಗಡಿ ಡಾ.ಚಂದ್ರು ಲಮಾಣಿ ಬಳಗದ ಅಧ್ಯಕ್ಷ ನವೀನ ಬೆಳ್ಳಟ್ಟಿ ಹಾಗೂ ಸದಸ್ಯರು ಭಾರತೀಯ ಜನತಾ ಪಕ್ಷದ ಮುಖಂಡರು ಕಾರ್ಯಕರ್ತರು ಪದಾಧಿಕಾರಿಗಳು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿ ಸಿಬ್ಬಂದಿಗಳು ಗಣ್ಯರು ಉಪಸ್ಥಿತರಿದ್ದರು.
Kshetra Samachara
05/10/2022 03:51 pm