ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 20*30 ಸುತ್ತಳತೆಯ ತಲಾ 9 ಶೌಚಾಲಯ,ಸ್ನಾನಗೃಹ ರ್ಮಾಣವಾಗುತ್ತಿವೆ.ಗದಗಿನ ಭೀಷ್ಮ ಕರೆ,ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ,ರೋಣದ ಇಟಗಿ ಭೀಮಮ್ಮ ದೇವಸ್ಥಾನ ಸೇರಿದಂತೆ 9 ಸ್ಥಳಗಳಲ್ಲಿ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿದೆ.
ಪ್ರತಿ ವರ್ಷ ಯೋಜನಾ ವೆಚ್ಚ ಹೆಚ್ಚಾಗುತ್ತಿದೆಯೇ ವಿನಃ ಕಾಮಗಾರಿಗಳು ಮುಗಿಯುತ್ತಿಲ್ಲ.ಪ್ರವಾಸೋದ್ಯಮ ಇಲಾಖೆಯು ಯೋಜನೆ ಜಾರಿಗೊಳಿಸಿದರೂ ಕೂಡ ನಿರ್ಮಾಣದ ಕಾರ್ಯವನ್ನು ಮಾಡೋದು ಕ್ರೆಡಲ್ ಇಲಾಖೆ.ಆದ್ರೆ ಕಳೆದೆರಡು ವರ್ಷಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ.ಹಾಗಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೂ ಬಿದ್ದು ಹೋಗ್ತಿವೆ.ಕಾಮಗಾರಿ ಪೂರ್ಣ ಗೊಳಿಸಿ ಅಂತ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಕ್ರೆಡಿಲ್ ಇಂಜಿನಿಯರ್ ಗಳಿಗೆ ಕರೆ ಮಾಡಿದ್ರೆ ಉಡಾಫೆ ಉತ್ತರ ಕೊಡ್ತಾರಂತೆ.
ಈ ಬಗ್ಗೆ ಕ್ರೆಡಿಲ್ ಅಧಿಕಾರಿಗಳೂ ಸಹ ಕೂಡ ಉಡಾಫೆ ಉತ್ತರವನ್ನೇ ಕೊಟ್ಟಿದ್ದಾರೆ.ಹಣ ಬಿಡುಗಡೆ ಆಗ್ತಿಲ್ಲ. ನಾವೇನು ಮಾಡೋದು ಅಂತ ಹೇಳ್ತಿದ್ದಾರೆ.ಇನ್ನು ಪ್ರಮುಖ ವಿಷಯ ಅಂದ್ರೆ 20*30 ಸುತ್ತಳತೆಯ ಕಟ್ಟಡಗಳಿಗೆ ತಲಾ 15 ಲಕ್ಷನಾ ಅಂತ ಗದಗ ಜನರು ಪ್ರಶ್ನಿಸ್ತಿದ್ದಾರೆ.7 ಲಕ್ಷದಲ್ಲಿ ಮುಗಿಯೋ ಕಾಮಗಾರಿಗೆ 15 ಲಕ್ಷ ಅಂದ್ರೆ ಇಲ್ಲಿ 40% ಕಮಿಷನ್ ಇದೆಯಾ ಎಂದು ಆರೋಪಿಸ್ತಿದ್ದಾರೆ.
9 ಕಾಮಗಾರಿಗಳಿಗೂ ಒಟ್ಟಾರೆ1.35 ಕೋಟಿ ಮಂಜೂರಾತಿ ಸಿಕ್ಕಿದೆ.ಅದರಲ್ಲಿ 75 ಲಕ್ಷ ಬಿಡುಗಡೆ ಆಗಿ ಖರ್ಚಾಗಿದೆ.ಇನ್ನೂ ಹಣ ಬೇಕು.ಪ್ರವಾಸೋದ್ಯಮ ಇಲಾಖೆ ಹಣ ಬಿಡುಗಡೆ ಮಾಡಿಸಿದ್ರೆ ನಾವು ಕೆಲಸ ಮಾಡ್ತಿವಿ ಅಂತಿದಾರೆ.
ಕೋವಿಡ್ ನಿಂದ ಆರ್ಥಿಕತೆ ಹದಗೆಟ್ಟಿರುವಾಗ ಯಾವ ಸಂದರ್ಭದಲ್ಲಿ ಸರ್ಕಾರ ಯಾವುದಕ್ಕೆ ಎಷ್ಟು ಬಿಡುಗಡೆ ಮಾಡಬೇಕು ಎಂಬುದನ್ನ ಅರಿತರೆ ಒಳ್ಳೆದು.ಜತೆಗೆ ಕೊಟ್ಟಿರೋ ಹಣವನ್ನು ಇಲಾಖೆಗಳು ಮುತುವರ್ಜಿಯಿಂದ ಖರ್ಚು ಮಾಡ್ತಿದ್ದವಾ ಎಂಬುದನ್ನು ಗಮನ ಹರಿಸುವುದು ಅಷ್ಟೇ ಮುಖ್ಯವಾಗಿದೆ.
PublicNext
08/10/2022 07:49 pm