ನರಗುಂದ : ಓದು ಒಕ್ಕಾಲು... ಬುದ್ಧಿ ಮುಕ್ಕಾಲು ಎಂಬ ಮಾತಿದೆ. ನಮ್ಮಲ್ಲಿ ಎಷ್ಟೇ ಓದಿದ್ದರೂ ಅದಕ್ಕೆ ಪೂರಕವಾದ ಬುದ್ಧಿ ಸಾಮರ್ಥ್ಯ ಬೇಕೇ ಬೇಕು. ಅಂತಹುದೇ ಕೃಷಿ ಬದುಕಿನ ಚಾಣಾಕ್ಷತನದ ಮೂಲಕ ಇಲ್ಲೊಬ್ಬ ಶಿಕ್ಷಣಸ್ಥ ರೈತನಾಗಿದ್ದಾನೆ.
ಎಲ್ಲರೂ ಪದವಿ ಮುಗಿಸಿ ಉದ್ಯೋಗ ಹುಡುಕುವ ಸಮಯದಲ್ಲಿ ಇವ್ರು ಬದುಕಿಗೆ ಶಿಕ್ಷಣ ಪಡೆದು, ಜೀವನಕ್ಕೆ ಕೃಷಿ ಕಾಯಕ ಮಾಡ್ತಾ ಖುಷಿ ಕಂಡಿದ್ದಾರೆ.
ಅರೆ, ಯಾರಪ್ಪಾ ? ಇದು ಅಂದ್ರಾ ? ಇವರೇ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಬಿಎ ಪದವೀಧರ ಶರಣಪ್ಪ ಹದಲಿ. ತಮ್ಮ 26ನೇ ವಯಸ್ಸಿಗೆ ಕೃಷಿಯಲ್ಲಿ ಆಸಕ್ತಿ ತೋರಿದ ಇವರು ಪ್ರಗತಿಪರ ಕೃಷಿಕನಾಗುವತ್ತ ದಾಪುಗಾಲು ಇಟ್ಟಿದ್ದಾರೆ.
ತಮ್ಮ 3 ಎಕರೆ ಭೂಮಿಯಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಯಾವೆಲ್ಲಾ ಬೆಳೆ ಬೆಳೆದಿದ್ದಾರೆ ? ಕೃಷಿ ಅವರನ್ನು ಆಕರ್ಷಿಸಿದ್ದು ಹೇಗೆ ? ಕೃಷಿಯಲ್ಲಿ ಅವರು ಕಂಡುಕೊಂಡ ಲಾಭ ಏನು ಎಂಬುದರ ಕುರಿತು ರೈತ ಶರಣಪ್ಪ ಜೊತೆ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ...
PublicNext
09/09/2022 08:17 pm