ಗದಗ:ಗದಗ ಜಿಲ್ಲಾ ಆಡಳಿತ,ಜಿಲ್ಲಾಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಆವರಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿನಾದ್ಯಂತ ಮಾನಸಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು ಕಳೆದ ದಶಕದಲ್ಲಿ ಶೇಕಡಾ 13% ಮಾನಸಿಕ ಅನಾರೋಗ್ಯ ಮತ್ತು ಮಾದಕ ವ್ಯಸನ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಜಗತ್ತಿನ 20% ಮಕ್ಕಳು ಮತ್ತು ಯುವ ಜನತೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು ಅದರಲ್ಲಿ 15 ವಯೋಮಾನದಿಂದ 29 ವಯೋಮಾನದವರಲ್ಲಿ ಆತ್ಮಹತ್ಯೆಯು ಸಾವಿಗೆ 2ನೇ ಮುಖ್ಯ ಕಾರಣವಾಗಿದೆ.ಆತ್ಮಹತ್ಯೆಯು ಅಪರಾಧವಾಗಿದ್ದು ಮಾನಸಿಕ ಆಪ್ತ ಸಮಾಲೋಚನೆಯಿಂದ ಇದನ್ನು ದೂರಮಾಡಬಹುದಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ ಪ್ರೀತ ಖೋನಾ, ಡಾ ಅಮೃತ ಹರಿದಾಸ,ಡಾ ಸಿ.ಎಸ್. ಹೊಸಮಠ, ರೂಪಸೇನ ಚವ್ಹಾಣ,ಉಮೇಶ ಕರಮುಡಿ, ಶ್ರೀಮತಿ ಗೀತಾ ಕಾಂಬಳೆ,ಪ್ರಭು ಹೊನಗುಡಿ,ಎಸ್.ಎಸ್.ಕುಬಸದ,ಎಸ್.ದೇವರವರ,ವ್ಹಿ.ಜಿ ಲಿಂಬಿಕಾಯಿ,ವಿನಾಯಕ ಕಾಳೆ,ವಿನಾಯಕ ವಾಗಮೋರೆ, ಕು.ಶೋಭಾ ವಡ್ಡರ,ಕು.ನೂತನ ಹೊಸಮನಿ, ಶಿರಸ್ತೆದಾರ ಬಿ.ಎಮ್.ಕುಕನೂರ,ಗದಗ ತಾಲೂಕಾ ಆರೋಗ್ಯ ಅಧಿಕಾರಿ ಕಛೇರಿ ಸಿಬ್ಬಂದಿ ವಾಯ್.ವಾಯ್. ಹಕ್ಕಿ ಹಾಗೂ ಕಛೇರಿ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Kshetra Samachara
10/10/2022 04:23 pm