ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಓಲಾ, ಉಬರ್ ನೋಟೀಸ್‌ಗೆ ಕ್ಯಾರೆ ಎನ್ನದೇ ಹೋದ್ರೆ ಕಠಿಣ‌ ಕ್ರಮ

ಜನರಿಗೆ ತೊಂದರೆ ಆಗಬಾರದು ಅಂತ ಓಲಾ, ಉಬರ್‌ಗೆ ನೋಟೀಸ್ ಕೊಡಲಾಗಿದ್ದು, ನೋಟೀಸ್‌ಗೆ ಕ್ಲಾರಿಫಿಕೇಷನ್ ಕೊಡಬೇಕಿತ್ತು. ಲೈಸೆನ್ಸ್ ಕೊಡುವ ವೇಳೆ ಓಲಾ- ಉಬರ್‌ಗೆ ಕಂಡೀಷನ್ ಮಾಡಲಾಗಿತ್ತು. ಆಟೋ ಪರವಾನಿಗೆ ಇಲ್ಲದೇ ಓಲಾ ಉಬರ್ ಓಡಿಸುತ್ತಿದ್ರು. ಸರ್ಕಾರಕ್ಕೆ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಓಲಾ ಉಬರ್ ಆ್ಯಪ್‌ಗೆ ಮಾತ್ರ ತಡೆ ಇಡಲಾಗಿದೆ ಎಂದು ಗದಗನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಟ್ಯಾಕ್ಸಿ, ಆಟೋಗಳು ಓಡಾಡಬಹುದು. ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೋಟೀಸ್‌ಗೆ ಕ್ಯಾರೆ ಎನ್ನದೇ ಹೋದ್ರೆ ಅಂತಹ ವಿಚಾರಕ್ಕೆ ಜಗ್ಗಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸುವುದಿಲ್ಲ. ಯಾರೇ ಆದರೂ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವಧಿ ಮುಗಿದರೂ ಓಲಾ ಉಬರ್ ಆ್ಯಪ್ ಮುಂದುವರೆದಿವೆ. ಈ ಬಗ್ಗೆ ಸಿರಿಯಸ್ ಆಗಿ ಮಾನಿಟರ್ ಮಾಡುತ್ತಿದ್ದೇನೆ. ಅವಧಿ ಮುಗಿದರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಜನರಿಗೆ ತೊಂದರೆ ಆಗಬಾರದು ಅಂತ ಮಾನವೀಯತೆ ದೃಷ್ಟಿಯಿಂದ ಸುಮ್ಮನಿದ್ದೆ. ಹೀಗೆ ಮುಂದುವರೆದರೆ ಕಠಿಣ ಕ್ರಮ ಜರುಗಿಸುತ್ತೆನೆ. ಅವಕಾಶ ಸಿಕ್ರೆ ಸರ್ಕಾರದಿಂದ ಆ್ಯಪ್ ಮಾಡಿ ಕೊಡ್ತೆವಿ ಅಂತ ಹೇಳಿದ್ರು.

Edited By :
PublicNext

PublicNext

12/10/2022 03:14 pm

Cinque Terre

25.32 K

Cinque Terre

1