ಶಾಸಕರಿಗೆ ನೀಡಿರುವ ಕಾರನ್ನು ಶಾಸಕರು ಬಳಕೆ ಮಾಡಬೇಕು ಅದನ್ನು ಬಿಟ್ಟು ಮನೆಯ ಮಂದಿ ಹತ್ತಿಕೊಂಡು ದುರುಪಯೋಗ ಮಾಡಿಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು.. ಶಿರಹಟ್ಟಿ ಶಾಸಕರ ಸಹೋದರ ಪುತ್ರನ ಅಂಧ ದರ್ಬಾರ್ ಹೆಚ್ಚಾಗಿದೆ. ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಕಾರ್ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಗದಗ ಜಿಲ್ಲೆ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಸಂಬಂಧಿಸಿದ ಕಾರ್ ನಲ್ಲಿ ಲಕ್ಷ್ಮಣ್ ದರ್ಬಾರ್ ಮಾಡುತ್ತಿರುವ ವಿಡಿಯೋ ಒಂದು ಲಭ್ಯವಾಗಿದೆ.
ಶಾಸಕರ ಹೆಸರಿನ ಕಾರ್ ನಲ್ಲಿ ಶಾಸಕರ ಸಹೋದರನ ಮಗ ಲಕ್ಷ್ಮಣ್ ಮೆರೆಯುತ್ತಿದ್ದಾರೆ. ಶಾಸಕರ ಇಲ್ಲದೇ, ಶಾಸಕರ ಸ್ಥಾನದಲ್ಲಿ ಕೂತು ಎಲ್ಲಂದರಲ್ಲಿ ಪ್ರಯಾಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕರ ವಾಹನದಲ್ಲಿ ವೈಯಕ್ತಿಕ ಕೆಲಸಕ್ಕೆ ಬಳಕೆ ಮಾಡುತ್ತಿರುವ ಲಕ್ಷ್ಮಣ್ ಲಮಾಣಿ ದರ್ಪ ತೋರುತ್ತಿದ್ದಾರೆ.
Kshetra Samachara
16/03/2022 01:32 pm