ಗದಗ: ಗದಗ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಅನೇಕ ಬೆಳೆಗಳು ಹಾಳಾಗಿದ್ದವು.ಇದ್ರಿಂದ ರೈತರು ಕಂಗಾಲಾಗಿದ್ರು. ಆದ್ರೆ ರೈತ್ರ ಅನುಕೂಲಕ್ಕೆ ಸರ್ಕಾರ ಅಸ್ತು ಅಂದಿದೆ.ಅಳಿದುಳಿದ ಬೆಳೆಗೆ ಬೆಲೆ ಸಿಗಲೆಂದು ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ.
ಒಂದು ಕ್ವಿಂಟಲ್ ಹೆಸರು ಬೆಳೆಗೆ 6,500 ರೂಪಾಯಿನಂತೆ ಖರೀದಿಸಲು ಖರೀದಿ ಕೇಂದ್ರ ತೆರೆದಿದೆ.13 ಜಿಲ್ಲೆಗಳಿಂದ 3.63 ಲಕ್ಷ ಕ್ವಿಂಟಲ್ ಹೆಸರು ಬೆಳೆಗೆ ಬೆಂಬಲ ಬೆಲೆ ನೀಡುವ ಮೂಲಕ ಖರೀದಿಗೆ ಮುಂದಾಗಿದೆ.
13 ಜಿಲ್ಲೆಗೆ ನೀಡಿದ ಟಾರ್ಗೆಟ್ ಗದಗ ಜಿಲ್ಲೆ ಒಂದೇ ರೀಚ್ ಆಗುವ ಸಾಧ್ಯತೆ ಇದೆ. ಗದಗ ಜಿಲ್ಲೆಯಿಂದ ಈಗಾಗಲೇ 3.41ಲಕ್ಷ ಕ್ವಿಂಟಾಲ್ ಗೆ ನೊಂದಣಿ ಆಗಿದೆ.ಜೊತೆಗೆ ಮುಕ್ತ ಮಾರುಕಟ್ಟೆಯಲ್ಲಿ 2 ಲಕ್ಷ ಕ್ವಿಂಟಲ್ ಗೂ ಅಧಿಕ ಹೆಸರು ಮಾರಾಟವಾಗಿದೆ.ಸರ್ಕಾರ ನೀಡಿರುವ ಗುರಿ ಗದಗ ಜಿಲ್ಲೆಯೊಂದರಲ್ಲೇ ಸಾಧಿಸಿದಂತಾಗಿದೆ ಅಂತಿದ್ದಾರೆ ಅಧಿಕಾರಿಗಳು.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಗದಗ ಜಿಲ್ಲೆಯಲ್ಲಿ ಶೇಕಡಾ 61 ರಷ್ಟು ಬೆಳೆಹಾನಿಯಾಗಿದೆ.ಪ್ರಸಕ್ತ ಸಾಲಿನ ಹೆಸರು ಬೆಳೆ ಇಳುವರಿ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ 73 ಸಾವಿರ ಹೆಕ್ಟೇರ್ ಹೆಸರು ಬೆಳೆ ನಾಶವಾಗಿದೆ.
ರಾಜ್ಯದಲ್ಲೇ ಗದಗ ಜಿಲ್ಲೆಯಲ್ಲಿ ಅಧಿಕ ಬೆಳೆ ಹಾನಿ ಎಂಬ ವರದಿಯಾಗಿದೆ.ಅಳಿದುಳಿದ ಹೆಸರು ಭಾಗಶಃ ಕಪ್ಪಾಗಿದೆ.ಈ ಸಂದರ್ಭದಲ್ಲಿ ಸರ್ಕಾರ ಖರೀದಿ ಕೇಂದ್ರ ತೆರೆಯುವ ಮೂಲಕ ರೈತರ ಬೆನ್ನಿಗೆ ನಿಂತಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಸಿಗ್ತಿದೆ.ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.
ಆದ್ರೆ 2 ತಿಂಗಳ ಮೊದಲೇ ಖರೀದಿ ಕೇಂದ್ರ ಓಪನ್ ಮಾಡಬೇಕಿತ್ತು.ರೈತರು ಕನಿಷ್ಠ ಬೆಲೆಗೆ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆದಿರುವುದು ವಿಪರ್ಯಾಸವೆ ಸರಿ.
PublicNext
23/09/2022 04:32 pm