ಗದಗ: ಆಸ್ತಿ ವಿಚಾರವಾಗಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ನಡೆದಿದೆ. ಸಂಗನಗೌಡ ಮಲ್ಲನಗೌಡ ನಾಯಕನೂರ (28) ಎಂಬಾತ ಕೊಲೆಯಾದ ಯುವಕ. ಆಸ್ತಿ ವಿಚಾರವಾಗಿ ಸಹೋದರ ಸಂಬಂಧಿಗಳು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗುರ್ಲಗಟ್ಟಿ ಗ್ರಾಮದ ಸಂಗನಗೌಡ ಮನೆ ಹತ್ತಿರವೇ ಬಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದು ಹತ್ಯೆ ಮಾಡಿದ್ದು ಸಹೋದರ ಸಂಬಂಧಿಗಳಾದ ಸುರೇಶ್ ಮತ್ತು ವೀರಪ್ಪ ಎಂಬಾತರಿಂದ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ. ಭೀಕರವಾಗಿ ಹತ್ಯೆ ಮಾಡಿ ಕೊಲೆಗಡುಕರು ಪರಾರಿಯಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇಂದು ಸಂಜೆ ವೇಳೆಯೇ ಕೊಲೆಯಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನರಗುಂದ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
PublicNext
20/09/2022 08:04 am