ಗದಗ: ಖಾಯಿಲೆಗೊಳಪಟ್ಟಿರೋ ಜಾನುವಾರುಗಳಿಗೆ ವೈಜ್ಞಾನಿಕ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಬೇಕೆಂದು ಆಗ್ರಹಿಸಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಜಾನುವಾರು ಸಮೇತ ರೈತರು ತಹಶಿಲ್ದಾರ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ರು.
ತಹಶೀಲ್ದಾರ ಕಚೇರಿಗೆ ದನ ಕರುಗಳ ಸಮೇತ ಬಂದ ರೈತ ಮುಖಂಡರು, ಗಂಟು ರೋಗ ಮತ್ತು ಚರ್ಮ ಖಾಯಿಲೆಗಳಿಂದ ನಮ್ಮ ಜಾನುವಾರುಗಳಿ ಬಳಲ್ತಿವೆ. ಆದರೆ ಸಮರ್ಪಕ ಔಷಧಿ ಚಿಕಿತ್ಸೆ ಸಿಗದೇ ಜಾನುವಾರುಗಳ ಸಾವನ್ನುಪ್ಪುತ್ತಿವೆ. ಅಲ್ಲದೇ ವ್ಯಾಪಕವಾಗಿ ಈ ವಿಚಿತ್ರ ಖಾಯಿಲೆ ಜಾನುವಾರುಗಳಿಗೆ ಹರಡುತ್ತಿದೆ. ಪಶು ವೈದ್ಯರಿಂದ ಸರಿಯಾದ ಚಿಕಿತ್ಸೆ, ಔಷಧಿ ಸಿಗದೇ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ನಮ್ಮ ಜಾನುವಾರು ನಮಗೆ ಉಳಿಸಿಕೊಡಿ ಎಂದು ರೈತರ ಆಗ್ರಹಿಸಿದರು.
ಈ ವೇಳೆ ನಿರ್ಲಕ್ಷ್ಯ ತೋರಿದ ಪಶು ವೈದ್ಯಾಧಿಕಾರಿಗಳ ವಿರುದ್ಧವೂ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಲ್ಲದೆ ತಕ್ಷಣ ಖಾಯಿಲೆಗೊಳಪಟ್ಟ ಜಾನುವಾರುಗಳು ಇರುವ ಸ್ಥಳಗಳಿಗೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಬೇಕೆಂದು ರೈತರು ತಹಶೀಲ್ದಾರಗೆ ಮನವಿ ಸಲ್ಲಿಸಿದರು.
PublicNext
10/10/2022 04:22 pm