ಗದಗ: ನರಗುಂದ ಪಟ್ಟಣದ ಕೇಂದ್ರೀಯ ಉಗ್ರಾಣದಲ್ಲಿ ಹೆಸರು ಬೆಂಬಲ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ರೈತರು ಆರೋಪಿಸಿ ನಾಫೇಡ್ ಹಾಗೂ ಫೆಡರೇಶನ್ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ.
ಸೊಸೈಟಿಗಳಿಂದ ಖರೀದಿ ಮಾಡಿದ ಹೆಸರು ಗ್ರೇಡಿಂಗ್ ಹೆಸರಿನಲ್ಲಿ ರಿಜಕ್ಟ್ ಮಾಡುತ್ತಿದ್ದಾರೆ ಅಧಿಕಾರಿಗಳು ಇದರಿಂದ ಫೆಡರೇಷನ್ ಹಾಗೂ ನಾಫೇಡ್ ಅಧಿಕಾರಿಗಳನ್ನು ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅತೀ ವೃಷ್ಟಿಯಿಂದ ಹೆಸರು ಬೆಳೆ ಹಾಳಾಗಿವೆ. ಅಳಿದು ಉಳಿದ ಹೆಸರು ತೆಗೆದುಕೊಂಡು ಬಂದ್ರೆ ನಮ್ಗೆ ಅನ್ಯಾಯ ಮಾಡುತ್ತಿದ್ದಾರೆ. ನಾಫೇಡ್ ಮ್ಯಾನೇಜರ ನವೀನ್ ಕುಮಾರಗೆ ಕೇಳಿದ್ರೆ ರೈತರ ಏನಾದರೂ ಸಮಸ್ಯೆ ಇದ್ರೆ ಸೊಸೈಟಿಯಲ್ಲಿ ಬಗೆಹರಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ.
ಫೆಡರೇಶನ್‌ನವರು ಸೊಸೈಟಿಯಲ್ಲಿ ಗ್ರೇಡರ್ ಹಾಕಿಕೊಳ್ಳಬೇಕಿತ್ತು, ಹಾಕಿಲ್ಲ ಸೊಸೈಟಿಯಲ್ಲಿ ಗ್ರೇಡರಗಳನ್ನು ಹಾಕಿಕೊಂಡು ಹೆಸರು ಗ್ರೇಡಿಂಗ್ ಮಾಡಬೇಕು ತಹಶೀಲ್ದಾರ್ ಜೊತೆಗೆ ಚರ್ಚೆ ಮಾಡಿ ಸೂಕ್ತವಾದ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ರೈತರಿಗೆ ಭರವಸೆ ನೀಡಿದರು.
PublicNext
10/10/2022 11:02 am