ರೋಣ: ಒಂದೇ ಒಂದು ಜಲಮೂಲ ರೈತಾಪಿ ಬದುಕಿನ ಕಷ್ಟ ದೂರ ಮಾಡಿದೆ. ಕೃಷಿ ದುಡಿಮೆಯಲ್ಲಿ ಬದುಕಿನ ಆಯುಸ್ಸು ಸವೆಸಿದವರಿಗೆ ಇದೀಗ ಸುಖ ಸಿಕ್ಕಿದೆ. ಆ ಸುಖವೇ 67ರ ಇಳಿ ವಯಸ್ಸಿನಲ್ಲೂ ಕೃಷಿಯನ್ನು ಪ್ರೀತಿಸುವಂತೆ ಮಾಡಿದೆ.
ಭೂತಾಯಿಯ ಮಡಿಲಲ್ಲಿ ಒಣ ಬೇಸಾಯದ ಮಾರ್ಗ ಕಂಡವರಿಗೆ ಕೃಷಿಹೊಂಡ ಲಾಭದ ಅತಿ ಅನುಕೂಲಕರ ಬೇಸಾಯದ ಮಾರ್ಗ ತೋರಿಸಿದೆ ಎಂದ್ರೇ ಸಾವಿರಾರು ರೈತರು ಹೌದೌದು ಅಂತಾರೇ.
ಅಂತಹ 100/100 ಸುತ್ತಳತೆಯ ಕೃಷಿಹೊಂಡವನ್ನು ತನ್ನ 2 ಎಕರೆ ಜಮೀನಿನ ಕೃಷಿಗಾಗಿ ನಿರ್ಮಿಸಿಕೊಂಡ ರೈತ ಶರಣಪ್ಪ ಸಂಗಪ್ಪ ಸಜ್ಜನವರ ಆದಾಯ ಮತ್ತು ಇಳುವರಿ ಎರಡನ್ನೂ ಹೆಚ್ಚಿಸುವ ಕಾಯಕದಲ್ಲಿ ಖುಷಿ ಕಂಡು ಒಂದು ಎಕರೆಯಲ್ಲಿ ಎರಡರಿಂದ ನಾಲ್ಕು ಚೀಲದವರೆಗೆ ಧಾನ್ಯ ಬೆಳೆದಿದ್ದು ಮುಂಗಾರು ಹೆಸರು, ಈರುಳ್ಳಿ, ಮೆಣಸಿನಕಾಯಿಯಂತಹ ವಾಣಿಜ್ಯ ಬೆಳೆ ಬೆಳೆದಿದ್ದಾರೆ.
ಬನ್ನಿ ಹಾಗಿದ್ರೇ, ಹಿರಿಯ ರೈತ ಶರಣಪ್ಪ ಸಂಗಪ್ಪ ಸಜ್ಜನವರ ಕೃಷಿಹೊಂಡದಿಂದ ಕಂಡುಕೊಂಡ ಲಾಭ ಏನು ? ಎಂಬುದರ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ನೋಡೋಣ...
PublicNext
23/09/2022 10:00 am