ಗದಗ : ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕದ ಬಳಿ ನಡೆದಿದೆ.
ಅತೀ ವೇಗವಾಗಿ ಬಂದ ಟಿಪ್ಪರ್ ಬೈಕ್ ಸವಾರನಿಗೆ ಹಿಂಬದಿಯಿಂದ ಗುದ್ದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಜಯಪ್ಪ ಶಿಗ್ಗಾವಿ ಹಾಗೂ ಹಿಂಬದಿ ಸವಾರ ಶೌಖತ್ ಅಲಿ ದೊಡ್ಡಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಜಲ್ಲಿಕಲ್ಲು ಹಾಗೂ ಎಂ.ಸ್ಯಾಂಡ್ ತುಂಬಿ ಅಧಿಕ ಭಾರ ಹೊತ್ತು ಹೋಗುವ ಟಿಪ್ಪರ್ ಹಾಗೂ ಲಾರಿಗಳಿಗೆ ಯಾವುದೇ ಬ್ರೇಕ್ ಇಲ್ಲದಂತಾಗಿದೆ. ಜನದಟ್ಟಣೆ ಪ್ರದೇಶದಲ್ಲಿಯೂ ಒಂದೇ ವೇಗದಲ್ಲಿ ಚಲಿಸುವ ಲಾರಿ ಮತ್ತು ಟಿಪ್ಪರ್ ಗಳ ಹಾವಳಿಗೆ ಪ್ರಯಾಣಿಕರು ಹೈರಾಣಾಗಿದ್ದಾರೆ.
PublicNext
04/10/2022 02:13 pm