ಕಿರುತೆರೆಯ ಬಿಗ್ ಶೋ 'ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಇದರಲ್ಲಿ ಸ್ಪರ್ಧಿಸಿದ್ದ ನಾಲ್ವರು (ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯ ಅಯ್ಯರ್) 'ಬಿಗ್ ಬಾಸ್ ಕನ್ನಡ 9' ಕಾರ್ಯಕ್ರಮಕ್ಕೆ ಕಾಲಿಡಲಿದ್ದಾರೆ.
ಬಿಗ್ ಶೋ ಬಿಗ್ ಬಾಸ್‌ಗೆ ಇದೇ ಸೆಪ್ಟೆಂಬರ್ 24ಕ್ಕೆ ಶುರುವಾಗಲಿದೆ. ಪ್ರತಿ ದಿನ ಟಿವಿ ಪರದೆಯಲ್ಲಿ ರಂಜಿಸಲು ಬಿಗ್ ಬಾಸ್ ಬರುತ್ತಿದೆ. ಈ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಓಟಿಟಿಯಲ್ಲಿ ಗಮನ ಸೆಳೆದ ದಿ ಬೆಸ್ಟ್ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ಈ ನಾಲ್ಕು ಜನ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ.
ಉಳಿದಂತೆ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಪ್ರೇಮ, ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಾಫಿನಾಡು ಚಂದು ಬಿಗ್ ಬಾಸ್‌ಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯ. ಇನ್ನು 'ಕಮಲಿ' ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು 'ಮುದ್ದುಮಣಿಗಳು' ಖ್ಯಾತಿಯ ಸಮೀಕ್ಷಾ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.
ಇನ್ನು 'ಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಿಯಾಂಕ ಕಾಮತ್ ಜೊತೆ ದಿವ್ಯ ವಸಂತ ಕೂಡ ಇರಲಿದ್ದಾರೆ. ಮಜಾ ಭಾರತ ಶೋ ಮೂಲಕ ಮೋಡಿ ಮಾಡಿರುವ ಚಂದ್ರಪ್ರಭ ಮತ್ತು ರಾಘವೇಂದ್ರ ಅವರು ಕೂಡ ತಮ್ಮ ಕಾಮಿಡಿ ಮೂಲಕ ದೊಡ್ಮನೆಯಲ್ಲಿ ರಂಜಿಸಲಿದ್ದಾರೆ. ಸರಿಗಮಪ ಶೋನ ಗಾಯಕಿ ಆಶಾ ಭಟ್ ಕೂಡ ಇರಲಿದ್ದಾರೆ ಎನ್ನಲಾಗಿದೆ.
PublicNext
21/09/2022 07:44 pm