ಮದುವೆ ಮನೆಯಲ್ಲಿ ಮಹಿಳೆಯೊಬ್ಬರ ಜೊತೆ ಡ್ಯಾನ್ಸ್ ಮಾಡಬೇಕೆಂದು ಅಲ್ಲಿದ್ದ ಜನರು ವೇದಿಕೆಯಲ್ಲೇ ಜಗಳವಾಡುತ್ತಿರುವ, ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಂದಿಗೆ ನೃತ್ಯ ಮಾಡಲು ಜನರು ಡ್ಯಾನ್ಸ್ ಫ್ಲೋರ್‌ನಲ್ಲಿ ಪರಸ್ಪರ ಜಗಳವಾಡಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಒದ್ದು, ಗುದ್ದಾಡುತ್ತಾರೆ. ಈ ವಿಡಿಯೋವನ್ನು 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ಜನರು ತಮ್ಮದೇ ಆದ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
PublicNext
15/05/2022 08:33 pm