ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BCCI ನಡೆಸಿದ ಲೆವೆಲ್-2 ಎಕ್ಸಾಂನಲ್ಲಿ 140 ಅಂಪೈರ್​ಗಳ ಪೈಕಿ ಜಸ್ಟ್‌ 3 ಜನ ಪಾಸ್​!

ಅಹಮದಾಬಾದ್: ಕ್ರಿಕೆಟ್‌ನಲ್ಲಿ ಎರಡು ತಂಡಗಳ ನಡುವೆ ಮಧ್ಯಸ್ಥಿಕೆ ವಹಿಸುವಲ್ಲಿ ಮತ್ತು ಆಟದ ಸುಗಮ ಚಾಲನೆಯಲ್ಲಿ ಅಂಪೈರ್ ಪ್ರಮುಖ ಪಾತ್ರ ವಹಿಸುತ್ತಾರೆ. ಮಳೆಯಂತಹ ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ ಅಂಪೈರ್‌ಗಳು ನಿರ್ಣಾಯಕರಾಗುತ್ತಾರೆ. ಇತ್ತೀಚ್ಚೆಗೆ ಬಿಸಿಸಿಐ ಅಹಮದಾಬಾದ್‌ನಲ್ಲಿ ಅಂಪೈರ್‌ಗಳಿಗೆ ಲೆವೆಲ್ 2 ಪರೀಕ್ಷೆಯನ್ನು ನಡೆಸಿತ್ತು.

ಈ ಕ್ರಮದಲ್ಲಿ 140 ಯುವ ಅಂಪೈರ್‌ಗಳು ಈ ಪರೀಕ್ಷೆ ಬರೆದರು. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಬಿಸಿಸಿಐ ಕಠಿಣ ಪ್ರಶ್ನೆಗಳ ಜೊತೆಗೆ ವಿಚಿತ್ರ ಪ್ರಶ್ನೆಗಳನ್ನು ಕೇಳಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ವೈರಲ್ ಆಗುತ್ತಿವೆ.

ಪ್ರಶ್ನೆ '1. ಮರಗಳು ಅಥವಾ ಫ್ಲಡ್ ಲೈಟ್ ಗಳು ಪಿಚ್ ನಲ್ಲಿ ನೆರಳು ಬೀಳುವುದು ಸಹಜ. ನೆರಳು ಇದೆ ಎಂದು ಬ್ಯಾಟರ್ ಅಂಪೈರ್‌ಗೆ ದೂರು ನೀಡಿದರೆ ಏನು ಮಾಡಬೇಕು?'

2ನೇ ಪ್ರಶ್ನೆ ಬೌಲರ್ ಗಾಯಗೊಂಡು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದಾನೆ. ಆದರೆ ಬೌಲ್ ಮಾಡಲು ಬರುತ್ತಿದ್ದಂತೆ ನೀವು ಅವರ ಬ್ಯಾಂಡೇಜ್ ತೆಗೆದಿದ್ದೀರಿ. ಇದರಿಂದ ಆತನ ಕೈಯಿಂದ ರಕ್ತಸ್ರಾವವಾಗಿದೆ. ಹಾಗಾದರೆ ಬ್ಯಾಂಡೇಜ್ ಇಲ್ಲದೆ ಬೌಲ್ ಮಾಡಬೇಕೆ?

ಪ್ರಶ್ನೆ 3: ಬೌಲರ್ ಎಸೆದ ಚೆಂಡನ್ನು ಬ್ಯಾಟರ್ ಆಡಿದರು. ಆದರೆ ಶಾರ್ಟ್ ಲೆಗ್ ನಲ್ಲಿ ಹಾರಿ ಬ್ಯಾಟ್ಸ್ ಮನ್​ ಹೆಲ್ಮೇಟ್​ ಅಥವಾ ಪ್ಯಾಡ್​ ಭಾಗದಲ್ಲಿ ಬೌಲ್​ ಸಿಲುಕಿಕೊಂಡಿದೆ. ಆಗ ಫೀಲ್ಡರ್ ಅಲ್ಲಿಂದ ನೇರವಾಗಿ ಬೌಲ್​ ಹಿಡಿದರೆ ಅದನ್ನು ಔಟ್​ ಎಂದು ಕೊಡುವಿರಾ? ಅಥವಾ ನಟೌಟ್​ ಎನ್ನುತ್ತೀರಾ?

ಒಟ್ಟು 37 ಪ್ರಶ್ನೆಗಳಲ್ಲಿ ಇಂತಹ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪರೀಕ್ಷೆ ಬರೆದ 140 ಮಂದಿಯಲ್ಲಿ ಮೂವರು ಮಾತ್ರ ತೇರ್ಗಡೆಯಾಗಿದ್ದಾರೆ. ಮೇಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಇಲ್ಲಿದೆ ನೋಡಿ.

ಪಂದ್ಯದ ಆರಂಭದಲ್ಲಿ ಪಿಚ್‌ನಲ್ಲಿನ ಪರಿಸ್ಥಿತಿಗಳಂತೆಯೇ ಇಡೀ ಪಂದ್ಯವನ್ನು ಆಡಬೇಕು. ಇಲ್ಲದಿದ್ದರೆ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಇದು ಮೊದಲ ಪ್ರಶ್ನೆಗೆ ಉತ್ತರವಾಗಿದೆ.

2. ಗಾಯವು ರಕ್ತಸ್ರಾವವಾಗಿದ್ದರೆ, ಬೌಲರ್ ಬೌಲ್ ಮಾಡಲು ಬ್ಯಾಂಡೇಜ್ ಅನ್ನು ತೆಗೆದುಹಾಕಬೇಕು. 3. ನಾಟೌಟ್ ಎಂದು ಪರಿಗಣಿಸಲಾಗಿದೆ. ಒಟ್ಟಾರೆಯಾಗಿ ಈ ರೀತಿಯ ವಿಭಿನ್ನ ಪ್ರಶ್ನೆಗಳನ್ನು ಬಿಸಿಸಿಐ ಕೇಳಿದ ಪ್ರಶ್ನೆಗಳಿಗೆ ಅಂಪೈಯರಗಳು ಸುಸ್ತಾಗಿದ್ದಾರೆ.

Edited By : Abhishek Kamoji
PublicNext

PublicNext

21/08/2022 05:35 pm

Cinque Terre

63.2 K

Cinque Terre

3

ಸಂಬಂಧಿತ ಸುದ್ದಿ