ಬೆಂಗಳೂರು: ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ಬಂದಿದೆ. ಈ ಗಿಫ್ಟ್ ಕೊಟ್ಟವರು ಬೇರೆ ಯಾರೋ ಅಲ್ಲ. ಅದು ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್.
ಹೌದು. ಕಿಚ್ಚ ಸುದೀಪ್‌ಗೆ ಕಪಿಲ್ ದೇವ್ ಒಂದು ಬ್ಯಾಟ್ ಗಿಫ್ಟ್ ಕೊಟ್ಟಿದ್ದಾರೆ. ಈ ಬ್ಯಾಟ್ ನಲ್ಲಿ 1983ರಲ್ಲಿ ವಿಶ್ವ ಕಪ್ ಆಡಿದ ಆಟಗಾರರ ಹೆಸರು ಬರೆಯಲಾಗಿದೆ. ಅವರ ಹಸ್ತಾಕ್ಷರವೂ ಇದೆ.
ಈ ಒಂದು ವಿಶೇಷ ಬ್ಯಾಟ್‌ನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಾವ್ ಎಂತಹ ಭಾನುವಾರ. ಇಂತಹ ದೊಡ್ಡ ಸರ್ಪ್ರೈಜ್‌ಗೆ ಧನ್ಯವಾದ.
ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ.ನಾನು ವಿಶ್ವದ ತುತ್ತ ತುದಿಯಲ್ಲಿದ್ದೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
PublicNext
26/06/2022 10:34 pm