ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದಾರೆ. ಶಾಲಿನಿ ತಲ್ವಾರ್ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಗಾಯಕ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಈಗ ಹನಿ ಸಿಂಗ್ ಮತ್ತು ಶಾಲಿನಿ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ವರದಿಗಳ ಪ್ರಕಾರ ಶಾಲಿನಿ ಹನಿ ಸಿಂಗ್‌ನಿಂದ ವಿಚ್ಛೇದನಕ್ಕಾಗಿ 10 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಆದರೆ ಇಬ್ಬರೂ 1 ಕೋಟಿ ರೂ.ಗೆ ಒಪ್ಪಿಕೊಂಡಿದ್ದಾರಂತೆ.
ಹನಿ ಸಿಂಗ್ ಅವರು ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಶಾಲಿನಿ ತಲ್ವಾರ್ ಅವರಿಗೆ ಜೀವನಾಂಶವಾಗಿ 1 ಕೋಟಿ ರೂಪಾಯಿ ನೀಡಲಿದ್ದಾರೆ. ಇನ್ನು 2023ರ ಮಾರ್ಚ್ 20ರಂದು ಮುಂದಿನ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
PublicNext
09/09/2022 08:21 pm