ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಯುವಕರಿಂದ ಸಗಣಿ ಓಕುಳಿಯಾಟ: ಎರಡು ವರ್ಷಗಳ ಬಳಿಕ ಸಂಭ್ರಮದಿಂದ ನಡೆದ ವಿಶಿಷ್ಟ ಆಟ..

ಗದಗ : ಬಣ್ಣ ಎರಚಿ ಓಕುಳಿ ಆಡ್ತಾರೆ.. ರಾಜ ಮಹಾರಾಜರ ಕಾಲದಲ್ಲಿ ಹಾಲೋಕುಳಿ ಕೂಡಾ ನಡೀತಿತ್ತು ಅಂತ ಹೇಳ್ತಾರೆ.. ಆದ್ರೆ, ಗದಗ ನಗರದಲ್ಲಿ ಸಗಣಿ ಓಕುಳಿ ಅನ್ನೋ ವಿಶಿಷ್ಟ ಆಚರಣೆ ಜಾರಿಯಲ್ಲಿದೆ. ನಗರದ ಗಂಗಾಪುರ ಪೇಟೆಯಲ್ಲಿ ಪರಸ್ಪರ ಸಗಣಿ ಎರಚಾಡುವ ಮೂಲಕ, ನೂರಾರು ವರ್ಷದಿಂದ ಆಚರಿಸಿಕೊಂಡು ಬಂದಿರೋ ವಿಶಿಷ್ಟ ಹಬ್ಬವನ್ನ ಜೀವಂತವಾಗಿಡಲಾಗಿದೆ.. ನಾಗರ ಪಂಚಮಿಯ ಮರುದಿನ ಷಷ್ಠಿ, ಕರಿಕಟ್ಟಂಬಲಿ ದಿನ ಗಂಡು ಮಕ್ಕಳು ಸೇರಿಕೊಂಡು ಈ ವಿಶೇಷ ಹಬ್ಬ ಆಚರಿಸ್ತಾರೆ..

ಪಂಚಮಿ ಮರುದಿನ ನಡೆಯೋ ಈ ವಿಶಿಷ್ಟ ಆಟಕ್ಕೆ ತಿಂಗಳಿಂದ ತಯಾರಿ ನಡೆಯುತ್ತೆ.. ಕರಿಕಟ್ಟಂಬಲಿ ದಿನ ಆಟ ಆಡೋದಕ್ಕೆ ಅಂತ ತಿಂಗಳು ಹಿಂದೆಯೇ ಸಗಣಿ ಸಂಗ್ರಹ ಕಾರ್ಯ ನಡೆಯುತ್ತೆ.. ಬಡಾವಣೆಯ ಯುವಕರ ಗುಂಪು, ದನ ಕರುಗಳಿರುವ ಮನೆಗಳಿಗೆ ತೆರಳಿ ಅವರಿಂದ ಸಗಣೆ ಬೇಡಿ ಪಡೀತಾರೆ.

ಸಗಣಿ ಕಾಳಗ ನೋಡೋದಕ್ಕೆ ಥೇಟ್ ಹೋಳಿ ಹುಣ್ಣಿಮೆಯ ರಂಗಿನಾಟ ಅನ್ಸುತ್ತೆ.. ಆದ್ರೆ ಬಣ್ಣದ ಬದ್ಲು ಇಲ್ಲಿ ಸಗಣಿ ಎರಚಲಾಗುತ್ತೆ.. ಬಡಾವಣೆಯ ಮುಖ್ಯರಸ್ತೆಯಲ್ಲಿ ಸಗಣಿಯ ಗುಂಪು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕುತ್ತಾರೆ. ಯುವಕರು ಎರಡು ತಂಡ ಕಟ್ಕೊಂಡು ಹತ್ತಿರದ ತೋಟಕ್ಕೆ ತೆರಳಿ ಸಗಣಿ ಆಟಕ್ಕೆ ರೆಡಿ ಆಗ್ತಾರೆ.. ಡಿಫರೆಂಟ್ ಓಕುಳಿಗೆ ಡಿಫರೆಂಟಾಗೇ ರೆಡಿಯಾಗುವ ಯುವಕರು ವಿವಿಧ ತರಕಾರಿಗಳ ಹಾರ ಮಾಡಿಕೊಂಡು ಹಾಕೊಳ್ತಾರೆ... ಅಲ್ಲದೆ, ವಿಚಿತ್ರ ವೇಶಭೂಷಣ ಧರಿಸಿ ಗಮನ ಸೆಳೀತಾರೆ.. ತೋಟದಿಂದ ದುರ್ಗಾದೇವಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸುತ್ತಾರೆ.. ಅಲ್ಲಿಂದ ಆಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗುತ್ತೆ.. ಸುಮಾರು ಎರಡು ಗಂಟೆಗಳ ಕಾಲ ಸಗಣಿ ಆಟ ಆಡಿ ಯುವಕರು ಫುಲ್ ಎಂಜಾಯ್ ಮಾಡ್ತಾರೆ..

Edited By : Somashekar
PublicNext

PublicNext

04/08/2022 12:55 pm

Cinque Terre

62.76 K

Cinque Terre

0