ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: "2023ರ ತನಕದ ಅಭಿವೃದ್ಧಿಯೇ ಮೂಲಮಂತ್ರ; ಶಾಸಕ ಯು.ಟಿ. ಖಾದರ್ ಅಭಿಮತ

ಉಳ್ಳಾಲ: ಅಧಿಕಾರ ಯಾವತ್ತೂ ಶಾಶ್ವತವಲ್ಲ. ನನಗೆ 2023ರ ತನಕ ಜನರು ಅಧಿಕಾರ ಕೊಟ್ಟಿದ್ದಾರೆ. ಆ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯ ಆಗಬೇಕು ಅದನ್ನ ಮಾಡೋದೇ ನನ್ನ ಮೂಲಮಂತ್ರ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ತೊಕ್ಕೊಟ್ಟು ಚೆಂಬುಗುಡ್ಡೆಯ ಬ್ರಹ್ಮಶ್ರೀ ಮಹಾಂಕಾಳಿ ದೈವಸ್ಥಾನಕ್ಕೆ ಶಾಸಕರ ಅನುದಾನದಲ್ಲಿ ನಿರ್ಮಿಸಿದ ನೂತನ ಮೇಲ್ಛಾವಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನರು ಎಂದಿಗೂ ನೆನಪಿಡುವ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಲ್ಲಿ ನನ್ನ ಮನಸ್ಸಿಗೂ ಸಂತೃಪ್ತಿ ದೊರೆಯುತ್ತದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಸಿಗುತ್ತೆ ಎಂಬ ಯಾವುದೇ ಅಭಿಲಾಷೆ ಇಲ್ಲ. ನನಗೆ 2023ರ ತನಕ ಕೊಟ್ಟ ಅಧಿಕಾರ, ಜವಾಬ್ದಾರಿಯನ್ನ ಸಮರ್ಪಕವಾಗಿ ಬಳಸೋದೇ ನನ್ನ ಅಭಿವೃದ್ಧಿಯ ಮೂಲ ಮಂತ್ರ ಎಂದರು.

Edited By : Somashekar
PublicNext

PublicNext

31/07/2022 06:37 pm

Cinque Terre

45.82 K

Cinque Terre

0

ಸಂಬಂಧಿತ ಸುದ್ದಿ