ಬೆಂಗಳೂರು: ಇಂದು ಶ್ರೀ ಶನಿದೇವರ ಜಯಂತ್ಯುತ್ಸವ ನಾಡಿನಾದ್ಯಂತ ನಡೆಯುತ್ತಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಶ್ರೀ ಶನಿದೇವರ ದೇವಸ್ಥಾನದಲ್ಲಿಕೂಡ ಶ್ರೀ ಸ್ವಾಮಿಯ ಜಯಂತ್ಯುತ್ಸವ ಶ್ರದ್ಧಾಭಕ್ತಿ, ಸಡಗರದಿಂದ ನೆರವೇರಿತು.
ಭಾನುವಾರ ವಿಶೇಷ ಅಭಿಷೇಕ, ಶಾಂತಿ ಹೋಮ, ಪೂಲಂಗಿ ಸೇವೆ ಜರುಗಿತು. ಇಂದು ಅಮವಾಸ್ಯೆಯ ದಿನ ಬೆಳಿಗ್ಗೆ ಮಹಾಭಿಷೇಕ ನಡೆಯಿತು. ವಿಶೇಷವಾದ ಪುಷ್ಪಾಲಂಕಾರದಿಂದ ಕಂಗೊಳಿಸಿದ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಶನಿಜನ್ಮ ಹಾಗೂ ಕಲ್ಯಾಣದ ಹರಿಕಥೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.
ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಪೌರಕಾರ್ಮಿಕರಿಗೆ ವಸ್ತ್ರ ವಿತರಣೆ ದೇವಸ್ಥಾನದ ವತಿಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳೆಲ್ಲ ಪ್ರಧಾನ ಅರ್ಚಕ ಗಣೇಶ್ ನೇತೃತ್ವದಲ್ಲಿ ನೆರವೇರಿತು.
Byte: ರಿಜ್ವಾನ್ ಅರ್ಷದ್, ಶಾಸಕ ಶಿವಾಜಿನಗರ
ಸ್ವಾಮಿ ಸೇವಾರ್ಥ ನೂರಾರು ಸೇವಾಕರ್ತರು, ಕಾರ್ಯಕರ್ತರು ಭಾಗವಹಿಸಿದ್ದರು. ಮಂಗಳವಾರವೂ ವಿಶೇಷ ಪೂಜೆ ಇದ್ದು, ಸನ್ನಿಧಾನದಲ್ಲಿ ಅನ್ನಸಂತರ್ಪಣೆಯಿದೆ. ಸಂಜೆ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ನಡೆದು, ಕಾರ್ಯಕ್ರಮ ಮುಕ್ತಾಯವಾಗಲಿದೆ.
PublicNext
30/05/2022 11:34 pm