ಗದಗ: ದಿನನಿತ್ಯ ಜಾತಿ ಜಾತಿಗಳ ಹೆಸರಿನಲ್ಲಿ ಅನೇಕ ಸಂಘರ್ಷ, ಗಲಾಟೆ ನಡೆಯುತ್ತಲೇ ಇರುತ್ತದೆ. ಆದ್ರೆ ಗದಗ ಜಿಲ್ಲೆ ಕಳಸಾಪೂರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಗಣೇಶ ಹಬ್ಬ ಆಚರಿಸ್ತಾರೆ. ಜಾತಿಭೇಧ ಮರೆತು ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ಮುಂದಾಗಿದ್ದು, ಕೋಮುಸೌಹಾರ್ದತೆಯ ಗಣೇಶನ ವೈಭವದ ಕುರಿತಾದ ಗದಗ ಜಿಲ್ಲೆಯ ಒಂದು ವರದಿ ಇಲ್ಲಿದೆ ನೋಡಿ.
ಗದಗ ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಒಟ್ಟಾಗಿ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ದೇವನೊಬ್ಬ ನಾಮ ಹಲವು ಎಂಬಂತೆ ಇಲ್ಲಿನ ಮುಸ್ಲಿಮರು, ಹಿಂದೂಗಳ ಜೊತೆಸೇರಿ ವಿಘ್ನ ನಿವಾರಕನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ನಿತ್ಯವೂ ಇವರೆಲ್ಲಾ ಸಾಮೂಹಿಕವಾಗಿ ಪೂಜೆಯಲ್ಲಿ ತೊಡಗಿಕೊಳ್ತಾರೆ.ಸತತ 12 ವರ್ಷದಿಂದ ಈಶ್ವರ ದೇವಾಲಯ ಕಮಿಟಿ ಹಾಗೂ ಅಂಜುಮಾನ್ ಏ-ಇಸ್ಲಾಂ ಜಂಟಿಯಾಗಿ ಏಕದಂತನನ್ನ ಪೂಜೆ ಮಾಡ್ತಾರೆ.ಜಾತಿಬೇಧ ತೊಲಗಬೇಕು, ಭಾರತೀಯರು ಒಂದೆಂಬ ಸಂದೇಶ ಸಾರಲು ಒಟ್ಟಿಗೆ ಹಬ್ಬ ಆಚರಿಸೋ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಶಾಂತಿಗೆ ಹೆಸರಾದ ಕಳಸಾಪೂರ ಗ್ರಾಮ ಈಗ ಭಾವೈಕ್ಯೆತೆಯ ಕೇಂದ್ರ ಬಿಂದುವಾಗಿದೆ.ರಾಜ್ಯಾದ್ಯಂತ ಕಳಸಾಪುರ ಗ್ರಾಮ ಭಾವೈಕ್ಯತೆಗೆ ಕಳಸ ಪ್ರಾಯವಾದಂತಿದೆ.ಇನ್ನು ರಂಜಾನ್, ಮೊಹರಂ ಸಂದರ್ಭದಲ್ಲಿ ಹಿಂದೂಗಳು ಮುಂದೆ ನಿಂತು ಒಟ್ಟಾಗಿ ಹಬ್ಬ ಆಚರಿಸುವ ಮೂಲಕ ಸಬ್ ಕಾ ಮಾಲೀಕ್ ಏಕ್ ಹೈ ಅನ್ನೊದನ್ನ ಈ ಗ್ರಾಮಸ್ಥರು ಸಾಬೀತು ಮಾಡ್ತಿದ್ದಾರೆ.ಜಾತಿ, ಮತ, ಪಂಥವಿಲ್ಲದೇ ಆಚರಣೆ ಮಾಡ್ತಾ ಬರ್ತಿರೋದು ತುಂಬಾನೆ ಖುಷಿ ತರುತ್ತೆ ಎಂತಿದ್ದಾರೆ ಸ್ಥಳಿಯರು.
ಹಿಂದೂ-ಮುಸ್ಲಿಂ ಸಮಾಜದವರೆಲ್ರೂ ವಿನಾಯಕನಿಗೆ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ.ಐದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜೆ ಪುನಸ್ಕಾರ ಮಾಡ್ತಾರೆ.ಇತ್ತೀಚಿನ ದಿನಗಳಲ್ಲಿ ಜಾತಿ, ಕೋಮು ಸಂಘರ್ಷಗಳ ಮಧ್ಯೆ ಇಂತಹ ಸಾಮರಸ್ಯದ ಬದುಕು ಹಾಗೂ ಆಚರಣೆ ಎಲ್ಲರಿಗೂ ಎಲ್ಲಾ ಕಡೆ ಮಾದರಿಯಾಗಲಿ ಎಂಬುದು ನಮ್ಮ ಆಶಯ.
PublicNext
03/09/2022 06:44 pm