ದಾವಣಗೆರೆ: ಇಂದು ಬೆಣ್ಣೆನಗರಿಯಲ್ಲಿ ಬಣ್ಣದೋಕುಳಿ ಸಂಭ್ರಮ. ಎಲ್ಲೆಡೆ ಬಣ್ಣವೋ ಬಣ್ಣ. ಯಾವ ಏರಿಯಾಕ್ಕೆ ಹೋದರೂ ತರಹೇವಾರಿ ಬಣ್ಣ ಎರಚುತ್ತ ಜನರು ಸಂಭ್ರಮಿಸಿದರು. ಹೋಳಿ ಸಡಗರ ಮುಗಿಲು ಮುಟ್ಟಿತ್ತು.
ದಾವಣಗೆರೆಯಲ್ಲಿ ಬಣ್ಣದಲ್ಲಿ ಬೆಣ್ಣೆ ಯುವಕ, ಯುವತಿಯರು ಮಿಂದೆದ್ದರು. ರಾಂ ಆಂಡ್ ಕೋ ವೃತ್ತದಲ್ಲಿ ಭರ್ಜರಿ ರಂಗೋತ್ಸವವೇ ನಡೆಯಿತು. ಯುವಕ, ಯುವತಿಯರಿಂದ ಸಾಮೂಹಿಕ ಬಣ್ಣದ ರಂಗಿನಾಟ ಗಮನ ಸೆಳೆಯಿತು. ಡಿಜೆ ಸಾಂಗ್‌ಗೆ ಯುವಕ, ಯುವತಿಯರು ಭರ್ಜರಿ ಡ್ಯಾನ್ಸ್ ಮಾಡಿದರು. ರಾಮ್ ಆಂಡ್ ಕೋ ಗೆಳೆಯರ ಬಳಗದಿಂದ ರಂಗ ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ಸಾವಿರಾರು ಜನರು ಬಣ್ಣದ ಲೋಕದಲ್ಲಿ ತೇಲಾಡಿದರು.
ರಂಗೋತ್ಸವದಲ್ಲಿ ಸಾವಿರಾರು ಯುವಕ, ಯುವತಿಯರು ಹಾಗೂ ಮಕ್ಕಳು ಕುಣಿದುಕುಪ್ಪಳಿಸಿದರು. ಹೋಳಿ ಆಡಿ ಸಂಭ್ರಮಿಸಿದ ಬೆಣ್ಣೆ ನಗರಿಯ ಯುವ ಸಮೂಹದ ಬಣ್ಣದ ರಂಗಿನಾಟಕ್ಕೆ ಭರ್ಜರಿ ಡಿಜೆ ಹಾಗೂ ಮ್ಯೂಸಿಕ್ ವ್ಯವಸ್ಥೆ ಮಾಡಲಾಗಿತ್ತು.
PublicNext
19/03/2022 01:31 pm