ಒಂದು ದಿನದ ಮಟ್ಟಿಗೆ ನಾನು ಹೃತಿಕ್ ರೋಷನ್ ಬೌನ್ಸರ್ ಆಗಲು ಇಷ್ಟಪಡುವೆ ಎಂದು ಖ್ಯಾತ ನಟಿ ತಮನ್ನಾ ಭಾಟಿಯಾ ಹೇಳಿಕೊಂಡಿದ್ದಾರೆ.
ಹೌದು. ತಮ್ಮ ಮುಂಬರುವ ಚಿತ್ರ 'ಬಬ್ಲಿ ಬೌನ್ಸರ್' ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಮಾತನಾಡಿದ ನಟಿ ತಮನ್ನಾ, ಹೃತಿಕ್ ರೋಷನ್ ಮತ್ತು ವಿಕ್ಕಿ ಕೌಶಲ್ ಅವರನ್ನು ತಮ್ಮ ಮೆಚ್ಚಿನ ನಾಯಕರು ಎಂದಿದ್ದಾರೆ. ಜೊತೆಗೆ ನಾನು ಒಂದು ದಿನ ಹೃತಿಕ್ ಹಾಗೂ ವಿಕ್ಕಿ ಅವರ ಬೌನ್ಸರ್ ಆಗಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಮಧುರ್ ಭಂಡಾರ್ಕರ್ ನಿರ್ದೇಶನದ 'ಬಬ್ಲಿ ಬೌನ್ಸರ್' ಚಿತ್ರದಲ್ಲಿ ತಮನ್ನಾ ಮಹಿಳಾ ಬೌನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
PublicNext
05/09/2022 05:47 pm