ಬೆಂಗಳೂರು: ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿ ಕಿರಣ್ ಯೋಗೇಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಬಿಸ್ ಬಾಸ್ ಜರ್ನಿ ಹಾಗೂ ವೈಯಕ್ತಿಕ ಜೀವನ ಬಗ್ಗೆ ಕಿರಣ್ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದ ಕರಾಳ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಮಾಡೆಲಿಂಗ್ ಕ್ಷೇತ್ರಕ್ಕೆ ನಾನು ಮೊದಲು ಎಂಟ್ರಿ ಕೊಟ್ಟಾಗ ನನಗೆ ಅವಕಾಶ ಕೊಡಲು ಒಬ್ಬರು ರೆಡಿ ಇದ್ದರು. ನಂತರ ಒಂದು ಶಾಟ್ ತೆಗೆದುಕೊಳ್ಳುತ್ತೇನೆ ಅದರಿಂದ ನೀವು ಪ್ರಸಿದ್ಧರಾಗಬಹುದು, ಓಕೆನಾ ಅಂದರು. ನನಗೆ ತುಂಬಾ ಖುಷಿಯಾಯಿತು. ಓಕೆ ಅಂದೆ. ತಕ್ಷಣ ಮತ್ತೊಂದು ಕರೆ ಬಂತು. ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ನೀವು ಆ ವ್ಯಕ್ತಿಯ ಜತೆ ಒಂದೇ ಒಂದು ದಿನ… ಎಂದು ಹೇಳಿದರು. ನನಗೆ ತುಂಬಾ ಶಾಕ್ ಆಗಿ ಅಲ್ಲಿಗೇ ಮಾಡೆಲಿಂಗ್ ನಿರ್ಧಾರ ಬಿಟ್ಟುಬಿಟ್ಟೆ ಎಂದು ಕರಾಳ ದಿನವನ್ನು ಸಂದರ್ಶನದಲ್ಲಿ ನೆನೆದಿದ್ದಾರೆ.
'ಅವರ ಆ ಬೇಡಿಕೆಗೆ ನಾನು ಒಪ್ಪದ ಕಾರಣ, ನಿನ್ನ ಮೂಗು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಎನ್ನಲು ಶುರು ಮಾಡಿದರು. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಕ್ರಮೇಣ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳದೇ ಈ ಹಂತಕ್ಕೆ ಬಂದಿದ್ದೇನೆ. ಮಾಡೆಲಿಂಗ್, ಸಿನಿಮಾದಲ್ಲಿ ವಿಪುಲ ಅವಕಾಶ ಸಿಗುತ್ತಿವೆ' ಎಂದು ಹೇಳಿದ್ದಾರೆ.
PublicNext
19/08/2022 10:26 am