'ಬಿಗ್ ಬಾಸ್ ಒಟಿಟಿ' (Bigg Boss OTT) ಆರಂಭವಾಗಿದೆ. ಸ್ಪರ್ಧಾಳುಗಳು ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕುತ್ತಿದ್ದಾರೆ.
ಈ ವೇಳೆ ಮಾರಿಮುತ್ತು ಮೊಮ್ಮಗಳು ಜಯಶ್ರೀ ಹೇಳಿದ್ದು ಹೀಗೆ..
ನಾನು ಹಲವರ ಜತೆ ಫ್ಲರ್ಟ್ ಮಾಡಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿಕೊಳ್ಳುವುದರ ಜತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸಿದ್ದಾರೆ. ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಜಯಶ್ರೀ ಮದುವೆಯಾದ ವ್ಯಕ್ತಿಯ ಜತೆ ರಿಲೇಶನ್ ಶಿಪ್ ನಲ್ಲಿದ್ದರು. ಅವರಿಂದ ಜೂಜು ಕಲಿತರಂತೆ. ಈ ವಿಚಾರದಲ್ಲಿ ಅವರ ಬಗ್ಗೆ ಅವರಿಗೇ ಅಸಹ್ಯ ಹುಟ್ಟಿತ್ತು.
'ವಿವಾಹಿತ ವ್ಯಕ್ತಿಯ ಜತೆ ನಾನು ಎರಡು ವರ್ಷ ರಿಲೇಶನ್ ಶಿಪ್ ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್ ಶಿಪ್ ನಲ್ಲಿದ್ದೆ' ಎಂದಿದ್ದಾರೆ. 'ನಾನು ಅವರಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದೆ. ಆಮೇಲೆ ಜೂಜು ಬಿಟ್ಟೆ. ಅವರಿಗೂ ಜೂಜು ಬಿಟ್ಟುಬಿಡಿ ಎಂದೆ. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ ಎಂದಿದ್ದಾರೆ ಜಯಶ್ರೀ.
ಜಯಶ್ರೀ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗಲ್ಲ. ಮಾರಿಮುತ್ತು ಮೊಮ್ಮಗಳು ಎಂದರೆ ತಕ್ಷಣ ಗೊತ್ತಾಗುತ್ತದೆ.
PublicNext
09/08/2022 03:04 pm