ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 'ಬಿಗ್ ಬಾಸ್' ಕನ್ನಡ ಒಟಿಟಿ ಸೀಸನ್‌ಗೆ ಕೌಂಟ್ ಡೌನ್..!

ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರ ಪ್ರಾರಂಭಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಬಿಗ್ ಬಾಸ್ ಕನ್ನಡ ತಯಾರಕರು ಮನೆ ನವೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸ್ಪರ್ಧಿಗಳು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿದ್ದಾರೆ. ಬಿಬಿಕೆ ಗಾಜಿನ ಮನೆಗೆ ಪ್ರವೇಶಿಸುವ ಮೊದಲು ತಮ್ಮ ಕೋವಿಡ್ ಸ್ಕ್ರೀನಿಂಗ್ ಅನ್ನು ಸಹ ಮುಗಿಸಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಮಿನಿ ರಿಯಾಲಿಟಿ ಶೋ ಆಗಿದ್ದು, ವೂಟ್, ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 24/7 ನೇರ ಪ್ರಸಾರವಾಗಲಿದೆ.

ಬಿಗ್ ಬಾಸ್ ಕನ್ನಡ ಒಟಿಟಿ ಯಲ್ಲಿ 18 ಸ್ಪರ್ಧಿಗಳು ಇರುತ್ತಾರೆ ಮತ್ತು ಶೋ 45 ದಿನಗಳವರೆಗೆ ಇರುತ್ತದೆ. ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಎಂದಿನಂತೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಕನ್ನಡ ವೀಕ್ಷಕರು ಗಮನಿಸಬೇಕಾದ ಒಂದು ಗಮನಾರ್ಹ ವಿಷಯವೆಂದರೆ ಒಟಿಟಿ ಆವೃತ್ತಿಯ ಯಾವುದೇ ಸಂಚಿಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವುದಿಲ್ಲ.

ಇನ್ನು ಆಗಸ್ಟ್ 5ರಂದು ಶೂಟಿಂಗ್ ಪ್ರಾರಂಭವಾಗಲಿದ್ದು, ಆಗಸ್ಟ್ 6 ರಂದು ಗ್ರ್ಯಾಂಡ್ ಲಾಂಚ್ ನಡೆಯಲಿದೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಗೆ ಪ್ರವೇಶಿಸುತ್ತಿರುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮೂಡಿದೆ.

ಈ ಬಾರಿ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ

1. ನಮ್ರತಾ ಗೌಡ : ನಾಗಿಣಿ 2 ರಲ್ಲಿ ಶಿವಾನಿ ಎಂಬ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಮ್ರತಾ ಗೌಡ .

2. ರೇಖಾ ವೇದವ್ಯಾಸ್ : ಬೆಂಗಳೂರಿನ ಬೆಡಗಿ ರೇಖಾ ವೇದವ್ಯಾಸ 35ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

3. ನವೀನ್ ಕೃಷ್ಣ : ನವೀನ್ ಕೃಷ್ಣ ಕನ್ನಡ ಚಿತ್ರರಂಗದ ಚಿರಪರಿಚಿತ ಮುಖ.

4. ತರುಣ್ ಚಂದ್ರ : ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಜನಪ್ರಿಯ ನಟ ತರುಣ್ ಚಂದ್ರ.

5. ಚಂದನ್ ಶರ್ಮಾ : ಚಂದನ್ ಶರ್ಮಾ ಕನ್ನಡ ವಾಹಿನಿಯ ಜನಪ್ರಿಯ ಸುದ್ದಿ ನಿರೂಪಕರು.

6. ದಿಲೀಪ್ ರಾಜ್ : ದಿಲೀಪ್ ರಾಜ್ ಕನ್ನಡದ ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ.

7. ರವಿ ಶ್ರೀವತ್ಸ : ರವಿ ಶ್ರೀವತ್ಸ ಪ್ರಧಾನವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ.

8. ಮಿಮಿಕ್ರಿ ಗೋಪಿ : ಮಿಮಿಕ್ರಿ ಗೋಪಿ ಅವರು ಪ್ರಸಿದ್ಧ ಹಾಸ್ಯನಟ ಮತ್ತು ಮಿಮಿಕ್ರಿ ಕಲಾವಿದರು ಆಗಿದ್ದಾರೆ.

9. ಭೂಮಿಕಾ ಬಸವರಾಜ್ : ಭೂಮಿಕಾ ಬಸವರಾಜ್ ಸಾಮಾಜಿಕ ಮಾಧ್ಯಮದ ಮೂಲಕ ಖ್ಯಾತರಾಗಿದ್ದಾರೆ.

10. ಆಶಾ ಭಟ್ : ಆಶಾ ಭಟ್ ಜನಪ್ರಿಯ ರೂಪದರ್ಶಿ.

ಈ ಹೆಸರುಗಳು ದೃಢೀಕರಿಸಲ್ಪಟ್ಟಿಲ್ಲ ಇವರು ಸಂಭಾವ್ಯ ಪಟ್ಟಿಗಳಲ್ಲಿದ್ದು, ಶೋ ತಯಾರಕರು ಹೆಸರುಗಳನ್ನು ಖಚಿತಪಡಿಸಿದ ನಂತರವೇ ಅಂತಿಮ ಸ್ಪರ್ಧಿಗಳು ಯಾರು ಎಂಬುದು ಗೊತ್ತಾಗಲಿದೆ. ಅಂದು ಅಸಲಿ ಆಟ ಶುರುವಾಗಲಿದೆ.

Edited By : Nagaraj Tulugeri
PublicNext

PublicNext

04/08/2022 04:47 pm

Cinque Terre

30.53 K

Cinque Terre

0